Saturday, November 23, 2024
Saturday, November 23, 2024

ಸಾರ್ವಜನಿಕ ಆಸ್ತಿ ಮಾನ ಪ್ರಾಣ ಸಂರಕ್ಷಣೆಯಲ್ಲಿ ಸಾರ್ವಜನಿಕ ಸಹಕಾರ ಅಗತ್ಯ- ಆರಗ ಜ್ಞಾನೇಂದ್ರ

Date:

ದೇಶದಲ್ಲೇ ನಂಬರ್‌ ಒನ್‌ ಸ್ಥಾನದಲ್ಲಿ ಕರ್ನಾಟಕ ಪೊಲೀಸ್‌ ಇಲಾಖೆ ಇದ್ದು, ಸ್ವಾತಂತ್ರ್ಯದ ನಂತರ ಪೊಲೀಸ್‌ ಇಲಾಖೆಯ ಠಾಣಾ ಕಟ್ಟಡಗಳು, ವಸತಿ ಗೃಹ ಕಟ್ಟಡಗಳ ನಿರ್ಮಾಣಕ್ಕೆ ಯಾವುದೇ ಸರ್ಕಾರ ಕ್ರಮ ಕೈಗೊಂಡಿಲ್ಲ.

ಆದರೆ ನಮ್ಮ ಸರ್ಕಾರದಿಂದ ರಾಜ್ಯದಲ್ಲೇ 200ಕೋಟಿ ವೆಚ್ಚದಲ್ಲಿ 107 ಠಾಣ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿ ಹಾಗೂ ಪೊಲೀಸ್‌ ಉಪ ನಿರೀಕ್ಷಕರ ಕಚೇರಿಯ ಕಟ್ಟಡ ಉದ್ಘಾಟನೆಯ ಅಂಗವಾಗಿ ಕನ್ನಡ ಸಂಘದ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಐದು ಠಾಣಾ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಎರಡು ಠಾಣೆಗಳನ್ನು ಕಟ್ಟಿಉದ್ಘಾಟಿಸಲಾಗಿದ್ದು ಸಾರ್ವಜನಿಕರು ಇದರ ಉಪಯೋಗವನ್ನು ಪಡೆಯಬಹುದಾಗಿದೆ ಎಂದರು.

ಸಾರ್ವಜನಿಕರ ಆಸ್ತಿ, ಮಾನ, ಪ್ರಾಣ ರಕ್ಷಣೆ ಮಾಡುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿಯವರ ಅಧಿಕಾರವಧಿಯಲ್ಲಿ ಗೃಹ ಇಲಾಖೆಯನ್ನು ಬಲಪಡಿಸುವಂತಹ ಕೆಲಸವನ್ನು ಮಾಡುತ್ತಿದ್ದು ತುಮಕೂರು ಜಿಲ್ಲೆಯಲ್ಲಿ 60ಕೋಟಿ ವೆಚ್ಚದಲ್ಲಿ 204 ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದೆ ಇದರೊಂದಿಗೆ ಅಗ್ನಿಶಾಮಕ ಠಾಣೆಯ ಕಟ್ಟಡಗಳು, ವಸತಿ ಗೃಹಗಳೊಂದಿಗೆ ಅಗತ್ಯ ವಾಹನಗಳನ್ನು ನೀಡುವ ಕೆಲಸ ಮಾಡುತ್ತಿದ್ದು, ಬಹುಮಹಡಿ ಕಟ್ಟಡದ ಅಗ್ನಿ ಆನಾಹುತಗಳಲ್ಲಿ ಜನರನ್ನು ಕಾಪಾಡುವ ಉದ್ದೇಶದಿಂದ ಸುಮಾರು 100ಮೀ. ಎತ್ತರಕ್ಕೆ ಹೋಗಿ ಬೆಂಕಿ ನಂದಿಸುವಂತಹ ವಾಹನವನ್ನು ಪಿನ್‌ಲ್ಯಾಂಡ್‌ನಿಂದ ತರಿಸಲಾಗಿದೆ ಎಂದರು.

ಜೈಲಿನಲ್ಲಿರುವಂತಹ ಖೈದಿಗಳಿಗೂ ಉತ್ತಮ ರೀತಿಯ ಆಹಾರ ಸೌಲಭ್ಯವನ್ನು ನೀಡಲಾಗುತ್ತಿದೆ. ಇಂದು ಬೇರೆ ದೇಶಗಳು ನಮ್ಮ ಯುವ ಜನತೆಯನ್ನು ಹಾಳುಮಾಡಲು ಮಾದಕ ವಸ್ತುಗಳ ಪ್ರಭಾವವನ್ನು ಬೀರುತ್ತಿದೆ. ಅದ್ದರಿಂದ ಇದನ್ನು ಹತ್ತಿಕ್ಕುವಂತಹ ಕೆಲಸವನ್ನು ನಮ್ಮ ಪೊಲೀಸರು ಮಾಡುತ್ತಿದ್ದಾರೆ.

ಇದಕ್ಕೆ ನಮ್ಮ ಸಾರ್ವಜನಿಕರು ಕೈಜೊಡಿಸಬೇಕು. ರಾಜ್ಯದ ಒಂದು ಲಕ್ಷ ಹತ್ತುಸಾವಿರ ಪೊಲೀಸರ ಹಿತಕಾಪಾಡುವುದು ಇಲಾಖೆಯ ಜವಾಬ್ದಾರಿಯಾಗಿದೆ. ಜನರ ಆಸ್ತಿ, ಪ್ರಾಣ, ಮಾನ ಕಾಪಾಡುವುದು ಪೊಲೀಸ್‌ ಇಲಾಖೆಯ ಕರ್ತವ್ಯ. ಅನೇಕ ಪ್ರಕರಣಗಳು ಇತ್ಯರ್ಥವಾಗದಿರಲು ವಿಧಿವಿಜ್ಞಾನ ಪ್ರಯೋಗಾಲಯದ್ದೇ ಸಮಸ್ಯೆ, ಅದ್ದರಿಂದ ಮುಂದಿನ ದಿನಗಳಲ್ಲಿ ಕೇಂದ್ರದ ಅನುಮತಿ ಸಿಕ್ಕಿರುವಂತಹ ವಿಧಿವಿಜ್ಞಾನ ವಿಶ್ವವಿದ್ಯಾನಿಲಯ ಪ್ರಾರಂಭಿಸಲಾಗುವುದು.
ಇದರೊಂದಿಗೆ ಸಂಚಾರಿ ಲ್ಯಾಬ್‌ಗಳನ್ನು ಪ್ರಾರಂಭ ಮಾಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ನೂತನ ಪೊಲೀಸ್‌ ಕಟ್ಟಡಗಳನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು. ಹಾಗೇ ಸಣ್ಣಪುಟ್ಟಗಲಾಟೆ ಗದ್ದಲಗಳಿಗೆ ಠಾಣೆಗಳಿಗೆ ಬರಬೇಡಿ. ಸಾಧ್ಯವಾದಷ್ಟುಈ ಠಾಣೆಗಳಿಗೆ ಬರುವುದನ್ನು ಕಡಿಮೆ ಮಾಡಿ. ಪದೇ ಪದೇ ಠಾಣೆಗೆ ಬಂದು ದಲ್ಲಾಳಿ ಕೆಲಸ ಮಾಡಬೇಡಿ. ನಿಮ್ಮ ಸಮಸ್ಯೆಗಳಿಗಷ್ಟೇ ಬನ್ನಿ. ಗಣಿಬಾಧಿತ ಪ್ರದೇಶಾಭಿವೃದ್ಧಿ ಮಾಡಲು 1600ಕೋಟಿ ಹಣ ಬಿಡುಗಡೆಯಾಗಿದ್ದು, ಇದರಲ್ಲಿ ತೆರೆದ ಚಾನಲ್‌ಗಳನ್ನು ಮುಚ್ಚಿಸಿ ನೀರು ಹರಿಸುವುದು ಹಾಗೂ ಬಳ್ಳಾರಿಯಿಂದ ಮೈಸೂರಿನವರೆಗೆ ರೈಲು ಹಳಿಯನ್ನು ಹಾಕಿಸುವ ಉದ್ದೇಶಕ್ಕೆ ಬಳಸಲು ವರದಿ ಸಿದ್ದಪಡಿಸಲಾಗುತ್ತಿದೆ.

ಚುನಾವಣೆ ಹತ್ತಿರ ಬಂದ ಹಾಗೆ ಇಲ್ಲದ ವ್ಯಕ್ತಿಗತ ಅಭಿವೃದ್ಧಿ ವಿಚಾರಗಳು ಚರ್ಚಿಸಲ್ಪಡುತ್ತವೆ. ಅದರೆ ಅದನ್ನು ಬಿಟ್ಟು ಒಟ್ಟಾರೆ ಅಭಿವೃದ್ಧಿಯ ಬಗ್ಗೆ ಮಾತನಾಡಬೇಕಾಗಿದ್ದು, ರಾಜ್ಯದಲ್ಲೇ ಬಗರ್‌ಹುಕುಂ ಸಾಗುವಳಿ ಚೀಟಿಯನ್ನು ನೀಡಿರುವ ಕ್ಷೇತ್ರವಾಗಿದ್ದು ನಮೂನೆ 53, 54 ಅರ್ಜಿಗಳನ್ನು ಪರೀಶಿಲಿಸಲಾಗಿದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...