Thursday, March 19, 2026
Thursday, March 19, 2026

ವಿದ್ಯುತ್ ಮತ್ತು ವಿದ್ಯುನ್ಮಾನ ಕ್ಷೇತ್ರ ದ ಅಂತಾರಾಷ್ಟ್ರೀಯ ಸಮ್ಮೇಳನ

Date:

ಶಿವಮೊಗ್ಗದ ಜೆ.ಎನ್.ಎನ್.ಎನ್. ಎಂಜಿನಿಯರಿಂಗ್ ಕಾಲೇಜು ಹಾಗೂ ಇನ್ಸಿಟ್ಯೂಟ್ ಆಫ್ ಎಲೆಕ್ನಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ ಮಂಗಳೂರಿನ ಉಪವಿಭಾಗದ ವತಿಯಿಂದ ಅ 14 ಮತ್ತು 15 ರಂದು 2 ದಿನಗಳ ಕಾಲ ಕಾಲೇಜಿನ ಎಂಬಿಎ ಎಂಸಿಎ ಸಭಾಂಗಣದಲ್ಲಿ ಎಲೆಕ್ನಿಕಲ್‌ ಎಲೆಕ್ಟ್ರಾನಿಕ್ಸ್‌ ಕ್ಷೇತ್ರದ ಅಂತರಾಷ್ಟ್ರೀಯ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್ ಸುದ್ದಿಗೋಷ್ಟಿಯಲ್ಲಿ ವಿವರಿಸಿದರು.

ಎಲೆಕ್ನಿಕಲ್ ಸರ್ಕ್ಯೂಟ್, ರೋಬೊಟಿಕ್ಸ್, ವಿಎಲ್‌ಎಸ್‌ಐ ನಂತಹ ಅನೇಕ ಸಾವೀನ್ಯ ವಿಷಯಗಳ ಕುರಿತು ಕಾರ್ಯಕ್ರಮದಲ್ಲಿ ಚರ್ಚೆಯಾಗಲಿದೆ. ಸಮ್ಮೇಳನದಲ್ಲಿ ವಿಶ್ವದ ತಾಂತ್ರಿಕ ಪರಿಣಿತರು, ಉದ್ಯಮಿಗಳು, ಶೈಕ್ಷಣಿಕ ತಜ್ಞರು ಭಾಗವಹಿಸಲಿದ್ದು, ಅನೇಕ ಸಂಶೋಧನಾರ್ಥಿಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

ಆ 14 ರಂದು ಬೆಳಿಗ್ಗೆ 10:00 ಗಂಟೆಗೆ ಬೆಂಗಳೂರಿನ ಸಿಡಾಕ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಸ್.ಡಿ. ಸುದರ್ಶನ್ ಅವರು ಉದ್ಘಾಟಿಸಲಿದ್ದಾರೆ.

ರಾಷ್ಟ್ರೀಯ ಶಿಕ್ಷಣ ಅಧ್ಯಕ್ಷರಾದ ಜಿ.ಎನ್.ನಾರಾಯಣರಾವ್, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದ ಸಂಘಟನಾ ಮುಖ್ಯಸ್ಥರಾದ ಡಾ.ಮಂಜುನಾಥ, ಪಿ, ಡಾ.ಎಸ್‌.ವಿ.ಸತ್ಯನಾರಾಯಣ, ಡಾ.ಪೂರ್ಣಲತಾ. ಜಿ ಉಪಸ್ಥಿತರಿರುತ್ತಾರೆ.

2 ದಿನಗಳ ಕಾರ್ಯಕ್ರಮದಲ್ಲಿ ಜರ್ಮನಿಯ ಕಾರ್ಪೊರೇಟ್ ಸಂಶೋಧನಾ ಕೇಂದ್ರದ ಸಂಶೋಧನಾರ್ಥಿ ಹೈಕೊ ಕೊಜಿಯಲಕ್ ಅವರು ಕಾರ್ಖಾನೆಗಳ ಸ್ವಯಂಚಾಲಿತ ಯಾಂತ್ರಿಕರಣದಲ್ಲಿನ ಸವಾಲುಗಳು, ಪಿಲಾನಿಯ ಬಿಟ್ಸ್ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎ.ಜಿ. ಸ್ನೇಹಂಸುಸಾಹ ಅವರು ನ್ಯೂರಲ್ ನೆಟ್ಸ್ ಕುರಿತು, ಬೆಂಗಳೂರು ಐಐಎಸ್ಸಿ ಪ್ರಾಧ್ಯಾಪಕರಾದ ಡಾ. ಎ.ಜಿ. ರಾಮಕೃಷ್ಣನ್ ಪ್ರಾಣಯಾಮದ ಮಹತ್ವದ ಕುರಿತು ಮಾತನಾಡಲಿದ್ದಾರೆ.

ಬೆಂಗಳೂರಿನ ಐಐಎಸ್ಸಿಯ ಸತೀಶ್ ಧವನ್ ಕೇಂದ್ರದ ಪ್ರಾಧ್ಯಾಪಕರಾದ ಡಾ.ಸಿ ಪಾಂಡುರಂಗನ್ , ಶೂನ್ಯ ಜ್ಞಾನದ ಪ್ರೊಟೊಕಾಲ್ ಕುರಿತಾಗಿ ಮಾತನಾಡಲಿದ್ದಾರೆ.

ಇದೇ ವೇಳೆ ನೂತನ ಎಸ್‌ಇಪಿ ಅನ್ವಯ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯೋಗ ಸಂಸ್ಥೆಗಳ ನಡುವಿನ ಸಂಬಂಧ ವೃದ್ಧಿಯ ಅವಶ್ಯಕತೆ ಕುರಿತು ತಜ್ಞರಿಂದ ಚರ್ಚೆ ನಡೆಯಲಿದೆ.

ಮಂಗಳೂರಿನ ನಾವಿಗೊ ಕಂಪನಿಯ ಸಿಇಓ ಪ್ರವೀಣ್ ಕುಮಾರ್ ಕಲಭಾವಿ, ಐಐಎಸ್ಸಿ ಹಿರಿಯ ಅಧ್ಯಾಪಕರಾದ ಡಾ.ಎ.ಜಿ.ರಾಮಕೃಷ್ಣನ್, ಮಣಿಪಾಲ ಡಾಟ್ ನೆಟ್ ಕಂಪನಿಯ ನಿರ್ದೇಶಕರಾದ • ಯು.ಸಿ.ನಿರಂಜನ್, ಮಣಿಪಾಲದ ಎಂಎಹೆಚ್ ಇ ನಿರ್ದೇಶಕರಾದ ಡಾ.ಕರುಣಾಕರ್ ಎ.ಕೆ, ಜಿಎಸ್‌ಎನ್‌ ಕಾಲೇಜಿನ ಎಂಬಿಎ ವಿಭಾಗದ ನಿವೃತ್ತ ನಿರ್ದೇಶಕರಾದ ಪ್ರೊ.ಎನ್.ದಿವಾಕರ್ ರಾವ್, ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಅ.15 ರಂದು ಸಂಜೆ 04:30 ಕ್ಕೆ ಸಮಾರೋಪ ಸಮಾರಂಭದಲ್ಲಿ ಐಐಎಸ್ಸಿ ಹಿರಿಯ ಪ್ರಾಧ್ಯಾಪಕರಾದ ಡಾ.ಎ.ಜಿ.ರಾಮಕೃಷ್ಣನ್ ಸಮಾರೋಪ ನುಡಿಗಳನ್ನಾಡಲಿದ್ದಾರೆ.

ಮಣಿಪಾಲ ಡಾಟ್ ನೆಟ್ ಕಂಪನಿಯ ನಿರ್ದೇಶಕರಾದ ಡಾ.ಯು.ಸಿ.ನಿರಂಜನ್, ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು.

ಸುದ್ದಿಗೋಷ್ಟಿಯಲ್ಲಿ ಸಮ್ಮೇಳನದ ಸಂಘಟನಾ ಮುಖ್ಯಸ್ಥರಾದ ಡಾ.ಮಂಜುನಾಥ ಡಾ.ಎಸ್.ವಿ.ಸತ್ಯನಾರಾಯಣ,ಎನ್‌ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...