Wednesday, May 6, 2026
Wednesday, May 6, 2026

ಮತ್ತಷ್ಟು ಕನ್ನಡಿಗರಿಗೆ ಪದ್ಮ ಪುರಸ್ಕಾರ

Date:

ರಾಜ್ಯದ ಮೂರು ಸಾಧಕರಿಗೆ ಮಂಗಳವಾರ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವೈದ್ಯ ಮತ್ತು ಶಿಕ್ಷಣ ತಜ್ಞ ಬಿ.ಎಂ‌. ಹೆಗ್ಡೆ, ಪ್ಯಾರಾ ಅಥ್ಲೀಟ್ ಕೆ.ವೈ. ವೆಂಕಟೇಶ್, ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಸೇರಿದಂತೆ ಹಲವು ಗಣ್ಯರು ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮ ಪ್ರಶಸ್ತಿ ಸ್ವೀಕರಿಸಿದರು. ಕೆ. ವೈ. ವೆಂಕಟೇಶ್ ಹಾಗೂ ಮಂಜಮ್ಮ ಜೋಗತಿ ಅವರು ಪದ್ಮಶ್ರೀ ಹಾಗೂ ಬಿ.ಎಂ. ಹೆಗ್ಡೆ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಕೆ.ಎಸ್.ಚಿತ್ರಾ , ಅಗ್ರಿ ಶಿಲ್ಪಿ ಸುದರ್ಶನ್ ಸಾಹೂ ಅವರು ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದರೆ, ಎಸ್. ಪಿ. ಬಾಲಸುಬ್ರಮಣ್ಯಂ ಪರವಾಗಿ ಅವರ ಪುತ್ರ ಪದ್ಮವಿಭೂಷಣ ಸ್ವೀಕರಿಸಿದರು.
ಡಾ.ಬಿ.ಎಂ‌. ಹೆಗಡೆ ಅವರು ವ್ಹೀಲ್ ಚೇರ್ ನಲ್ಲಿ ಬಂದು ಪ್ರಶಸ್ತಿ ಪಡೆದುಕೊಂಡರು. ಜೋಗತಿ ಮಂಜಮ್ಮ ಅವರು ಪ್ರಶಸ್ತಿ ಪಡೆದ ಬಳಿಕ ರಾಷ್ಟ್ರಪತಿಯವರಿಗೆ ದೃಷ್ಟಿ ತೆಗೆಯುವ ಮೂಲಕ ಗಮನ ಸೆಳೆದರು.
ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್, ಕೇಂದ್ರದ ಮಾಜಿ ಸಚಿವ ರಾಮ್ ವಿಲಾಸ್ ಪಾಸ್ವಾನ್, ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಘೋಷಿಸಿದ್ದು, ಗೊಗೊಯ್ ಅವರ ಪತ್ನಿ, ಪಾಸ್ವಾನ್ ಅವರ ಪುತ್ರ ಹಾಗೂ ಪಟೇಲ್ ಪುತ್ರ ಪ್ರಶಸ್ತಿ ಸ್ವೀಕರಿಸಿದರು.
ಟೇಬಲ್ ಟೆನಿಸ್ ಆಟಗಾರ್ತಿ ಮೌಮಾದಾಸ್, ಕುಸ್ತಿಪಟು ವೀರೇಂದರ್ ಸಿಂಗ್, ಬಾಂಗ್ಲಾದೇಶ ವಿಮೋಚನೆ ಯುದ್ಧದಲ್ಲಿ ಮಹತ್ವದ ಪಾತ್ರವಹಿಸಿದ ಲೆಫ್ಟಿನೆಂಟ್ ಕರ್ನಲ್ ಖ್ವಾಜಿ ಸಜ್ಜದ್ ಅಲಿ ಜಹೀರ್, ಸೇರಿದಂತೆ 51 ಸಾಧಕರಿಗೆ ರಾಮನಾಥ್ ಕೋವಿಂದ್ ಅವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ನಾಲ್ವರಿಗೆ ಪದ್ಮವಿಭೂಷಣ, ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

K. R. Periyakaruppan ಒಂದೇ ಒಂದು ಮತದ ಅಂತರದಲ್ಲಿ ಸೋತ (ಮಂತ್ರಿ) ಡಿಎಂಕೆ ಅಭ್ಯರ್ಥಿ ಪೆರಿಯಾಕರುಪ್ಪನ್.

ಒಂದು ಮತ ತಾನೆ. ಎಂಬ ನಿರ್ಲಕ್ಷ್ಯ ಬಹಳ ಅಭ್ಯರ್ಥಿಗಳಲ್ಲಿದೆ. ಆದರೆ ಆ...

Ballari News ಪಾರಾಗುವ ಬಗೆ ಹೇಗೆ?. ಬಳ್ಳಾರಿ ಜಿಲ್ಲಾ ವೈದ್ಯಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ನೀಡಿರುವ ಮಾಹಿತಿ ಎಲ್ಲರಿಗೂ ಅನ್ವಯ

Ballari News ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ...

S.N. Channabasappa ಪಶುವೈದ್ಯಕೀಯ ಮತ್ತು‌ ಮೀನುಗಾರಿಕೆ ವಿಜ್ಞಾನ ವಿವಿಗಳ ನೌಕರರಿಗೆ ನೀಡುತ್ತಿರುವ ಎನ್ ಪಿ ಎ ಕಡಿತ: ಶಾಸಕ ಚೆನ್ನಿ ಅವರಿಂದ ಖಂಡನೆ

S.N. Channabasappa "ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ...

Summer ಬೇಸಿಗೆಯ ಬಿರುಬಿಸಿಲು!. ಜಾನುವಾರು ರಕ್ಷಣೆಗೆ ಪಶುವೈದ್ಯಕೀಯ ಕಾಲೇಜಿನ ತಜ್ಞರ ಮಾರ್ಗದರ್ಶನ – ಮಾಹಿತಿ ಇಲ್ಲಿದೆ.

Summer ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಮೇ ತಿಂಗಳಲ್ಲಿ ಬಿಸಿಲ ಧಗೆ ಹೆಚ್ಚಾಗುವ...