ರಾಜ್ಯದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಆಗಲಿದೆ ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು.
ಈ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಕೇಂದ್ರದಿಂದ ಪತ್ರ ಬರೆದಿದೆ. ಹುಬ್ಬಳ್ಳಿ, ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಜಾಗ ಗುರುತಿಸುವ ಪ್ರಯತ್ನ ನಡೆದಿದೆ. ಶಿವಮೊಗ್ಗದಲ್ಲಿ ಎಫ್ಎಸ್ಎಲ್ ಲ್ಯಾಬ್ ಸ್ಥಾಪನೆ ಆಗಲಿದೆ ಎಂದು ತಿಳಿಸಿದರು.
ಭೂತಾನ್ ಚೀನಾ ಪಕ್ಕದಲ್ಲಿದೆ. ಕೆಲವೊಂದು ಕಾರಣಕ್ಕೆ ಅದರ ಜೊತೆ ವ್ಯಾಪಾರ ಮಾಡುವ ಅಗತ್ಯ ಇದೆ. ಸರ್ಕಾರ ಬದಲಾದಾಗ ಆ ದೇಶದೊಂದಿಗೆ ಮಾಡಿಕೊಂಡ ಒಪ್ಪಂದ ಬದಲಾಗುವುದಿಲ್ಲ. ಆ ದೇಶದಿಂದ ಕೇವಲ ಹಸಿ ಅಡಕೆ ಮಾತ್ರ ಬರಲಿದೆ. ಅದು ಸಮುದ್ರ ಮಾರ್ಗವಾಗಿ ಮಾತ್ರ ಬರಬೇಕಿದೆ. ಕೆಲವರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿಯಾಗಿ ಕೆಲವರು ರೈತರನ್ನು ಶೋಷಣೆ ಮಾಡಲು ಯತ್ನಿಸುತ್ತಿದ್ದಾರೆ. ಎಲೆ ಚುಕ್ಕಿ ರೋಗ ಸಹ ಅಡಕೆ ರೈತರಿಗೆ ಮಾರಕವಾಗುತ್ತಿದೆ. ಅದಕ್ಕಾಗಿ ಸರ್ಕಾರ 8 ಪರಿಹಾರ ನೀಡಲು ಮುಂದಾಗಿದೆ. ಇದರಿಂದ ಸಣ್ಣ ರೈತರಿಗೆ ಅನುಕೂಲವಾಗಲಿದೆ ಎಂದರು.
ಅಗತ್ಯ ಬಿದ್ದರೆ ಪರಿಹಾರ ಪ್ರಮಾಣ ಹೆಚ್ಚಳಕ್ಕೆ ಸರ್ಕಾರ ಗಮನ ಹರಿಸಲಿದೆ. ಸಾಮಾನ್ಯ ಪೇದೆ ನೇಮಕ ಸಂಬಂಧ ವಯೋಮಿತಿ ಕಡಿಮೆ ಮಾಡಲು ಸಾಧ್ಯವಿಲ್ಲ. ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಏನೂ ನಷ್ಟವಿಲ್ಲ. ಉತ್ತರ ಭಾರತದಲ್ಲಿ ನೆಲೆಕಳೆದುಕೊಂಡಿರುವ ಕಾಂಗ್ರೆಸ್ ಇಲ್ಲಿ ತನ್ನ ಅಸ್ತಿತ್ವಕ್ಕೆ ಹುಡುಕಾಡುತ್ತಿದೆ ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.