Sunday, December 14, 2025
Sunday, December 14, 2025

ಬಡವರಿಗೆ ನಿರ್ಗತಿಕರಿಗೆ ದಾನ ನೀಡುವುದು ಈದ್ ಮಿಲಾದ್ ವಿಶೇಷ

Date:

ಇಂದು ಈದ್-ಈ-ಮಿಲಾದ್-ಉನ್-ನಬಿ ಎಂದು ಕರೆಯುವ ಈದ್‌ ಮಿಲಾದ್‌ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನವು ಮುಸ್ಲಿಂ ಸಮುದಾಯದವರಿಗೆ ಮಹತ್ವಪೂರ್ಣ ದಿನವಾಗಿದೆ. ಈ ದಿನ ಇಸ್ಲಾಂನ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಜನಿಸಿದರು. ಮತ್ತು ಜನಿಸಿದ ಅದೇ ದಿನದಂದು ಅವರು ಮರಣವನ್ನು ಹೊಂದಿದ್ದರು. ಈದ್-ಈ-ಮಿಲಾದ್-ಉನ್-ನಬಿ ಹಬ್ಬವನ್ನು ಈದ್-ಈ-ಮಿಲಾದ್ ಅಥವಾ ಮೌಲಿದ್ ಎಂದೂ ಕರೆಯುತ್ತಾರೆ.

ಭಾರತ ಹಾಗೂ ಪ್ರಪಂಚದ ಹಲವು ದೇಶಗಳಲ್ಲಿ ಇದನ್ನು ಮುಸ್ಲಿಂ ಸಮುದಾಯದ ಜನರು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ದಿನ ಮುಹಮ್ಮದ್ ಜನ್ಮದಿನದ ವಿಶೇಷ ಸಂದರ್ಭದಲ್ಲಿ ಮೆರವಣಿಗೆಗಳನ್ನು ಕೈಗೊಳ್ಳಲಾಗುತ್ತದೆ.

ಮುಸ್ಲಿಂ ಸಮುದಾಯಕ್ಕೆ ಈ ದಿನವು ಅತ್ಯಂತ ಮಹತ್ವದ್ದಾಗಿದೆ. ಪ್ರವಾದಿ ಮುಹಮ್ಮದ್ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳ 12 ನೇ ತಾರೀಖಿನಂದು ಜನಿಸಿದರು. ಇಸ್ಲಾಮಿಕ್ ನಂಬಿಕೆಯ ಪ್ರಕಾರ, ಪ್ರವಾದಿ ಕ್ರಿಸ್ತಶಕ 517 ರಲ್ಲಿ ಜನಿಸಿದರು.

ಇದಾದ ನಂತರವೇ ಪ್ರವಾದಿ ಪ್ರಪಂಚದ ಮೂಲೆ ಮೂಲೆಗಳಿಗೆ ಪವಿತ್ರ ಕುರಾನ್‌ ಸಂದೇಶವನ್ನು ಸಾರಲು ಆರಂಭಿಸಿದನು.
ಈದ್‌ – ಈ – ಮಿಲಾದ್‌ – ಉನ್‌ – ನಬಿ ಹಬ್ಬವನ್ನು ಸಾಮಾನ್ಯವಾಗಿ ಎಲ್ಲರೂ ಈದ್‌ ಮಿಲಾದ್‌ ಎಂದು ಕರೆಯುತ್ತಾರೆ. ಈ ಮೇಲಿನ ಕಾರಣದಿಂದಾಗಿ ಮುಸ್ಲಿಂ ಬಾಂಧವರು ಈ ಹಬ್ಬವನ್ನು ಆಚರಿಸುತ್ತಾರೆ.

ಈದ್-ಈ-ಮಿಲಾದ್ ನ ಮೊದಲ ಹಬ್ಬವನ್ನು ಈಜಿಪ್ಟ್ ನಲ್ಲಿ ಆಚರಿಸಲಾಯಿತು ಎಂದು ಹೇಳಲಾಗಿದೆ. ಅದೇ ಸಮಯದಲ್ಲಿ, 11 ನೇ ಶತಮಾನದ ಆಗಮನದೊಂದಿಗೆ, ಇದನ್ನು ಪ್ರಪಂಚದಾದ್ಯಂತ ಆಚರಿಸಲು ಪ್ರಾರಂಭಿಸಿದರು.

ಈದ್-ಈ-ಮಿಲಾದ್-ಉನ್-ನಬಿ ಹಬ್ಬವನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಲ್ಲಿ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈದ್-ಈ-ಮಿಲಾದ್-ಉನ್-ನಬಿಯನ್ನು ಇಂದು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಉಪಖಂಡದ ಇತರ ಭಾಗಗಳಲ್ಲಿ ಆಚರಿಸಲಾಗುತ್ತಿದೆ. ಸುನ್ನಿ ಮತ್ತು ಶಿಯಾ ಪಂಗಡಗಳು ಈದ್-ಈ-ಮಿಲಾದ್-ಉನ್-ನಬಿಯನ್ನು ವಿವಿಧ ದಿನಗಳಲ್ಲಿ ಆಚರಿಸುತ್ತಾರೆ. ತಮ್ಮ ಪಂಗಡಗಳಿಗೆ ಅನುಗುಣವಾಗಿ ಅವರು ಈದ್‌ ಮಿಲಾದ್‌ ಹಬ್ಬವನ್ನು ಹಮ್ಮಿಕೊಳ್ಳುತ್ತಾರೆ.

ಈದ್-ಈ-ಮಿಲಾದ್-ಉನ್-ನಬಿಯ ವಿಶೇಷ ದಿನದಂದು, ಅನೇಕ ಸ್ಥಳಗಳಲ್ಲಿ ಮೆರವಣಿಗೆಗಳನ್ನು ತೆಗೆದುಕೊಳ್ಳಲಾಗುತ್ತದೆ, ಮತ್ತು ಕೆಲವು ಸ್ಥಳಗಳಲ್ಲಿ, ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ.

ಈ ದಿನದಂದು ಮಸೀದಿಗಳನ್ನು ವಿಶೇಷವಾಗಿ ಅಲಂಕರಿಸಲಾಗುವುದು ಮತ್ತು ಪವಿತ್ರ ಪುಸ್ತಕ ಕುರಾನ್ ಅನ್ನು ಓದಲಾಗುತ್ತದೆ. ಅದೇ ಸಮಯದಲ್ಲಿ ಮೊಹಮ್ಮದ್ ಸಾಹೇಬರ ಸಂದೇಶಗಳು ಭಿತ್ತರಿಸಲಾಗುತ್ತದೆ. ಈ ವಿಶೇಷ ಸಂದರ್ಭದಲ್ಲಿ, ಸಾಂಪ್ರದಾಯಿಕ ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ ಮತ್ತು ಬಡವರಿಗೆ ವಿತರಿಸಲಾಗುತ್ತದೆ.

ಈದ್‌ ಮಿಲಾದ್‌ ದಿನ ಬಡವರಿಗೆ, ನಿರ್ಗತಿಕರಿಗೆ ದಾನ ಮಾಡುವುದರಿಂದ ಅಲ್ಲಾಹುನು ಸಂತೋಷಗೊಳ್ಳುತ್ತಾನೆ. ಹಾಗೂ ಆ ಕುಟುಂಬದ ಮೇಲೆ ತನ್ನ ಆಶೀರ್ವಾದವನ್ನು ಕರುಣಿಸುತ್ತಾನೆ ಎನ್ನುವ ನಂಬಿಕೆ ಮುಸ್ಲಿಂ ಬಾಂದವರದ್ದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Visvesvaraya Technological University ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಾಗಾರ

Visvesvaraya Technological University ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ "ಜ್ಞಾನ...

B.Y. Raghavendra ಶಿವಮೊಗ್ಗದಲ್ಲಿ ESIC ಉಪ-ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಬಿ.ವೈ.ರಾಘವೇಂದ್ರ ಮನವಿ

B.Y. Raghavendra ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾದ ಸನ್ಮಾನ್ಯ ಡಾ....

CM Siddharamaih ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಭೆ

CM Siddharamaih ಸುವರ್ಣ ವಿಧಾನಸೌಧದಲ್ಲಿ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ...