2024ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ರಾಷ್ಟ್ರೀಯ ಪಕ್ಷವನ್ನ ಸ್ಥಾಪನೆ ಮಾಡಿದ್ದಾರೆ.
ತಮ್ಮ ಹೊಸ ಪಕ್ಷಕ್ಕೆ ‘ಭಾರತ್ ರಾಷ್ಟ್ರ ಸಮಿತಿ’ ಎಂದು ನಾಮಕರಣ ಮಾಡಿ ಘೋಷಿಸಿದ್ದಾರೆ.
ತೆಲಂಗಾಣ ಭವನ’ದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ನಾಯಕರು, ಜೆಡಿಎಸ್ ನಾಯಕರು ಹಾಗೂ ತೃತೀಯರ ರಂಗ ಬೆಂಬಲಿತರು ಭಾಗಿಯಾಗಿದ್ದರು. ಈ ಮೂಲಕ ದೇಶದಲ್ಲಿ ತೆಲಂಗಾಣ ಸಿಎಂ ಕೆಸಿಆರ್ ಹೊಸ ಪಕ್ಷ ಕಟ್ಟುವ ಕನಸು ಇವತ್ತು ಸಾಕಾರಗೊಂಡಿದೆ. ಮುಂದಿನ ಚುನಾವಣೆಗಳನ್ನ ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಿನ ಸಮರ ಸಾರಲು ಕೆಸಿಆರ್ ಹೊಸಪಡೆಯನ್ನ ಕಟ್ಟಿದ್ದಾರೆ.
ಓಡುವ ಕುದುರೆ ಎನ್‌ಡಿಎಗೆ ಲಗಾಮು ಹಾಕಲು, ಕುಗ್ಗುತ್ತಿರೋ ಕಾಂಗ್ರೆಸ್‌ನ ನೆಲಕಚ್ಚಿಸಲು ಕೆಸಿಆರ್‌ರ ಹೊಸ ಪಕ್ಷ ಇವತ್ತು ಉದಯವಾಗಿದೆ.
2024ಕ್ಕೆ ನರೇಂದ್ರ ಮೋದಿ ಎನ್‌ಡಿಎ ಸರ್ಕಾರದ 5 ವರ್ಷದ ಅವಧಿ ಮಕ್ತಾಯವಾಗಲಿದೆ. ದೇಶದಲ್ಲಿ ಮತ್ತೆ ಲೋಕಸಭೆ ಚುನಾವಣೆ ನಡೆಯಲಿದೆ.
ಹೀಗಾಗಿ ರಾಷ್ಟ್ರ ರಾಜಕೀಯದಲ್ಲಿ ತೃತೀಯ ರಂಗ ತಲೆ ಎತ್ತುವ ಎಲ್ಲಾ ಚರ್ಚೆಗಳು ಆರಂಭವಾಗಿವೆ. ಅದರಲ್ಲೂ ದೇಶದಲ್ಲಿ ಬಿಜೆಪಿಯ ನಾಗಾಲೋಟಕ್ಕೆ ಬ್ರೇಕ್ ಹಾಕಲು ತೆಲಂಗಾಣ ಸಿಎಂ ಹೊಸ ಪಕ್ಷ ಹುಟ್ಟುಹಾಕಲು ಸಿದ್ಧರಾಗಿದ್ದಾರೆ. ಈ ಮೂಲಕ ಕೆ. ಚಂದ್ರಶೇಖರ್ ರಾವ್ ಪ್ರಧಾನಿ ಹುದ್ದೆಯ ಕನಸನ್ನ ಹಿಂಬಾಲಿಸುತ್ತಿದ್ದಾರೆ.