ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ-22) ಪರಿಷ್ಕೃತ ರ್ಯಾಂಕ್ ಪಟ್ಟಿ ಫಲಿತಾಂಶ ಶನಿವಾರ ಅ.1ರಂದು ಮಧ್ಯಾಹ್ನ 2 ಗಂಟೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ karresults.nic.in ನಲ್ಲಿ ಪ್ರಕಟವಾಗಲಿದೆ.
ಫಲಿತಾಂಶಕ್ಕಾಗಿ 2 ಲಕ್ಷ ವಿದ್ಯಾರ್ಥಿಗಳ ಜತೆಗೆ ಪಾಲಕರು ಸಹ ಕಾಯುತ್ತಿದ್ದಾರೆ.
ಈ ಮೊದಲು ಪರಿಷ್ಕೃತ ರ್ಯಾಂಕ್ ಪಟ್ಟಿಯನ್ನು ಸೆ.29ರಂದು ಪ್ರಕಟಿಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಆಶ್ವತ್ಥ ನಾರಾಯಣ ತಿಳಿಸಿದ್ದರು.
ಆದರೆ, ತಾಂತ್ರಿಕ ಕಾರಣಗಳಿಂದ ಅ.1ಕ್ಕೆ ಮುಂದೂಡಲಾಗಿದೆ. ಅದರಂತೆ ಫಲಿತಾಂಶ ಪ್ರಕಟವಾಗಲಿದೆ.
ಕೆಇಎ ಜು.30ರಂದು ಪ್ರಕಟಿಸಿದ್ದ ಸಿಇಟಿ ಫಲಿತಾಂಶದಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡದ ಕಾರಣ ವಿಳಂಬಕ್ಕೆ ಕಾರಣವಾಗಿದೆ. ನ್ಯಾಯಾಲಯದ ತೀರ್ಪಿನ ಅನುಗುಣವಾಗಿ ಪರಿಷ್ಕೃತ ರ್ಯಾಂಕ್ ಪಟ್ಟಿಯನ್ನು ಪ್ರಕಟಿಸುತ್ತಿದೆ.