” ಸುರಾ ಸಂಪೂರ್ಣ ಕಲಶಂ
ರುಧಿರಾಪ್ಲುತಮೇವಚ/
ದಧಾನಾ ಹಸ್ತ ಪದ್ಮಾಭ್ಯಾಂ ಕೂಷ್ಮಾಂಡಾ
ಶುಭದಾಸ್ತುಮೆ//
ನವರಾತ್ರಿಯ ನಾಲ್ಕನೆಯ ದಿನ
ದೇವಿಯ ರೂಪವಾದ ಕೂಷ್ಮಾಂಡದೇವಿಯ
ಆರಾಧನೆಯ ದಿನ.
ಜಗತ್ತಿನ ಅಣುಅಣುವಿನಲ್ಲಿ ಚೈತನ್ಯ ತುಂಬಿದ
ದೇವಿ ಈಕೆ.ದುರ್ಗಾಮಾತೆಯಂತೆ ಹಲವು ಭುಜ
ಗಳನ್ನು ಹೊಂದಿದ ಈಕೆಯೂ ಕೂಡ ತನ್ನ
ಕೈಗಳಲ್ಲಿ ಆಯುಧ ಹಾಗೂ ಪುಷ್ಪ ಎರಡನ್ನು
ಹಿಡಿದು ಅಪಾರ ತೇಜಸ್ಸಿನೊಂದಿಗೆ,ಕಾಂತಿಯೊಂದಿಗೆ ಬೆಳಗುತ್ತಿರುತ್ತಾಳೆ. ಈಕೆಯನ್ನು ಸೃಷ್ಟಿಕರ್ತೆ ಎಂದೂ ಕರೆಯುತ್ತಾರೆ. ನವದುರ್ಗೆಯರೂ ಪವಾದ ಕೂಷ್ಮಾಂಡ ದೇವಿ ಜಗತ್ತನ್ನು ಪೊರೆಯುತ್ತಿದ್ದಾಳೆ ಎಂದು ಭಾವಿಸಲಾಗಿದೆ.
ಆದ್ದರಿಂದ ಇವಳೇ ಸೃಷ್ಟಿಯ ಆದಿ-ಸ್ವರೂಪ ಶಕ್ತಿಯಾಗಿದ್ದಾಳೆ.
ಇಂತಹ ಶಕ್ತಿ ಸ್ವರೂಪಳಾದ ಕೂಷ್ಮಾಂಡದೇವಿಯನ್ನು ಭಕ್ತಿಯಿಂದ ಪೂಜಿಸಿ ಅನುಗ್ರಹ ಪಡೆಯೋಣ.
ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ