ಒಡಿಶಾದ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯು ಕೊಹಿನೂರ್ ವಜ್ರವು ಜಗನ್ನಾಥನಿಗೆ ಸೇರಿದ್ದು ಎಂದು ಹೇಳಿಕೊಂಡಿದೆ. ಹಾಗೂ ಅದನ್ನು ಯುನೈಟೆಡ್ ಕಿಂಗ್‌ಡಮ್‌ನಿಂದ ಐತಿಹಾಸಿಕ ಪುರಿ ದೇವಸ್ಥಾನಕ್ಕೆ ಹಿಂದಿರುಗಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮಧ್ಯಸ್ಥಿಕೆಯನ್ನು ಕೋರಿದೆ.
ರಾಣಿ ಎಲಿಜಬೆತ್ ರ ಮರಣದ ನಂತರ ಆಕೆಯ ಮಗ ಪ್ರಿನ್ಸ್ ಚಾರ್ಲ್ಸ್ ರಾಜನಾಗಿದ್ದಾನೆ. ನಿಯಮಗಳ ಪ್ರಕಾರ, ಈಗ 105 ಕ್ಯಾರೆಟ್ ವಜ್ರದ ಕಿರೀಟವು ಪ್ರಿನ್ಸ್ ಪತ್ನಿ ಕ್ಯಾಮಿಲ್ಲಾಗೆ ಹೋಗುತ್ತದೆ.
12ನೇ ಶತಮಾನದ ದೇವಾಲಯಕ್ಕೆ ಕೊಹಿನೂರ್ ವಜ್ರವನ್ನು ಮರಳಿ ತರುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಪುರಿ ಮೂಲದ ಶ್ರೀ ಜಗನ್ನಾಥ ದೇವಾಲಯದವರು ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದಾರೆ.
ಕೊಹಿನೂರ್ ವಜ್ರವು ಶ್ರೀ ಭಾಗವಾನ್ ಜಗನ್ನಾಥ ಅವರದ್ದು. ಇದು ಈಗ ಇಂಗ್ಲೆಂಡ್ ರಾಣಿ ಬಳಿ ಇದೆ. ದಯಮಾಡಿ ಅದನ್ನು ಭಾರತಕ್ಕೆ ತರಲು ಕ್ರಮಕೈಗೊಳ್ಳುವಂತೆ ನಮ್ಮ ರಾಷ್ಟ್ರಪತಿಯವರನ್ನು ವಿನಂತಿಸುತ್ತೇವೆ. ಮಹಾರಾಜ ರಂಜಿತ್ ಸಿಂಗ್ ಅವರು ತಮ್ಮ ಉಯಿಲಿನಲ್ಲಿ ಇದನ್ನು ಜಗನ್ನಾಥ ದೇವರಿಗೆ ದಾನ ಮಾಡಿದ್ದಾರೆ ಎಂದು ಸೇನಾ ಸಂಚಾಲಕ ಪ್ರಿಯಾ ದರ್ಶನ್ ಪಟ್ನಾಯಕ್ ಜ್ಞಾಪಕ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಂಜಾಬ್‌ನ ಮಹಾರಾಜ ರಂಜಿತ್ ಸಿಂಗ್ ಅವರು ಅಫ್ಘಾನಿಸ್ತಾನದ ನಾದಿರ್ ಶಾ ವಿರುದ್ಧದ ಯುದ್ಧದಲ್ಲಿ ಗೆದ್ದ ನಂತರ ಪುರಿ ಭಗವಂತನಿಗೆ ವಜ್ರವನ್ನು ದಾನ ಮಾಡಿದ್ದಾರೆ. ಆದರೆ, ತಕ್ಷಣ ಅದನ್ನು ಹಸ್ತಾಂತರಿಸಲಿಲ್ಲ. ರಣಜಿತ್ ಸಿಂಗ್ 1839 ರಲ್ಲಿ ನಿಧನರಾದರು. 10 ವರ್ಷಗಳ ನಂತರ, ಬ್ರಿಟಿಷರು ಕೊಹಿನೂರ್ ಅನ್ನು ಅವರ ಮಗ ದುಲೀಪ್ ಸಿಂಗ್‌ನಿಂದ ಕಿತ್ತುಕೊಂಡರು. ಆದರೆ, ಅದು ಪುರಿಯಲ್ಲಿ ಜಗನ್ನಾಥ ದೇವರಿಗೆ ನೀಡಲ್ಪಟ್ಟಿದೆ ಎಂದು ಅವರಿಗೆ ತಿಳಿದಿತ್ತು ಎಂದು ಇತಿಹಾಸಕಾರ ಮತ್ತು ಸಂಶೋಧಕ ಅನಿಲ್ ಧೀರ್ ಅವರು ತಿಳಿಸಿದ್ದಾರೆ.