Tuesday, October 1, 2024
Tuesday, October 1, 2024

ನಾರಾಯಣ ಗುರುಗಳಿಂದ ಜಾತೀಯ ವಿಷ ಬೀಜ ಕಿತ್ತುಹಾಕಲು ಪ್ರಯತ್ನ

Date:

ನಾರಾಯಣಗುರು ಅವರ ಆಶಯದಂತೆ ನಮ್ಮೆಲ್ಲರ ನಡುವಿನ ಜಾತಿಯ ವಿಷ ಬೀಜ ಕಿತ್ತು ಹಾಕಿ ನಾವೆಲ್ಲರೂ ಒಂದೇ ಎಂಬ ಭಾವನೆ ಸಮಾಜಕ್ಕೆ ಇಂದೆಲ್ಲ, ನಾಳೆ ಬರಲಿದೆ’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಆಶಿಸಿದರು.

ಶಿವಮೊಗ್ಗದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಜಿಲ್ಲಾ ಆರ್ಯ ಈಡಿಗರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬ್ರಹ್ಮಶ್ರೀ ನಾರಾಯಣಗುರುಗಳು ದೇವರಿಗೆ ದೇವರಾಗಿದ್ದವರು. ಅಂತಹ ಗುರುಗಳ ಆದರ್ಶಗಳನ್ನು ನಾವು ಬೆಳೆಸಿಕೊಳ್ಳಬೇಕು. ಸಮ ಸಮಾಜದ ಕನಸು ಕಂಡ ಗುರುಗಳ ಸಿದ್ಧಾಂತಗಳ ಅಳವಡಿಸಿಕೊಂಡಾಗ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಹೇಳಿದರು.

ಈಗಾಗಲೇ ಮಹಾನ್ ಪುರುಷರು ಜಾತಿ ಸೂಚಕ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. ಬಸವಣ್ಣ, ನಾರಾಯಣಗುರು, ಕನಕದಾಸ ಮುಂತಾದ ಆದರ್ಶ ಪುರುಷರನ್ನು ಜಾತಿಗೆ ಮೀಸಲಾಗಿಸುವುದು ದುರದೃಷ್ಟಕರ ಎಂದರು.

ನಾರಾಯಣಗುರುಗಳು ಯುಗ ಪುರುಷರು. ಕೇರಳದಲ್ಲಿ ಹುಟ್ಟಿದ ಅವರು ಅಂದು ಅಲ್ಲಿ ಸವರ್ಣೀಯರು ಮತ್ತು ಅವರ್ಣೀಯರ ಮಧ್ಯೆ ಇರುವ ತಾರತಮ್ಯ ಹೋಗಲಾಡಿಸಿದವರು. ಅಲ್ಲಿ ಸವರ್ಣೀಯರು ಯಾವುದೇ ತೆರಿಗೆ ಕಟ್ಟುವ ಹಾಗಿರಲಿಲ್ಲ. ಮನೆಯನ್ನೂ ಎತ್ತರಕ್ಕೆ ಕಟ್ಟಲು ಅವಕಾಶ ನೀಡಲಾಗುತ್ತಿತ್ತು. ಆದರೆ, ಕೆಳವರ್ಗದವರು ಮನೆಯನ್ನು ಎತ್ತರಕ್ಕೆ ಕಟ್ಟುವಂತಿರಲಿಲ್ಲ. ಜೊತೆಗೆ ತೆರಿಗೆ ಕಟ್ಟಬೇಕಿತ್ತು. ಅಸಮಾನತೆ ಮಿತಿ ಮೀರಿತ್ತು. ಮನುಸ್ಮೃತಿ ಮತ್ತು ವರ್ಣಾಶ್ರಮ ಪದ್ಧತಿಗಳು ಅವರ ಬದುಕು ಅರಳಲು ಬಿಡುತ್ತಿರಲಿಲ್ಲ ಎಂದು ಉಪನ್ಯಾಸ ನೀಡಿದ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಎಸ್.ಎಂ. ಹರೀಶ್ ಹೇಳಿದರು.

ನಾರಾಯಣಗುರುಗಳು ಸಾಮಾಜಿಕ ಅಸಮಾನತೆ ಹೋಗಲಾಡಿಸಿದರು. ಸ್ವಾವಲಂಬಿ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟವರು. ಇಂತಹವರ ಆದರ್ಶಗಳು ಇಂದಿನ ಅಗತ್ಯ ಎಂದರು.

ಈಡಿಗ ಸಮಾಜ ಇಂದು ಅತ್ಯಂತ ಹಿಂದುಳಿದಿದೆ. ಇಲ್ಲಿ 26 ಪಂಗಡಗಳಿವೆ. ಎಲ್ಲರೂ ಬಡವರಾಗಿದ್ದಾರೆ. ಇವರಿಗೆ ಶೇ 5ರಷ್ಟು ಒಳ ಮೀಸಲಾತಿ ಬೇಕು. ಹಾಗೆಯೇ ನಾರಾಯಣಗುರು ಹೆಸರಲ್ಲಿ ಈಡಿಗ ಅಭಿವೃದ್ಧಿ ನಿಗಮ, ಆಧ್ಯಯನ ಕೇಂದ್ರ ಸ್ಥಾಪಿಸಬೇಕು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ
ಒತ್ತಾಯಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...