ರಾಜ್ ಪಥ್ ಗುಲಾಮಿತನದ ಸಂಕೇತವಾಗಿತ್ತು. ಕಿಂಗ್ಸ್ ವೇ ಇತಿಹಾಸ ಪುಟ ಸೇರಿದೆ. ಈಗ ಕರ್ತವ್ಯ ಪಥದ ರೂಪದಲ್ಲಿ ಹೊಸ ಯುಗ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ದೆಹಲಿಯ ಹೃದಯಭಾಗದಲ್ಲಿರುವ ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಬಳಿಕ ನವೀಕೃತಗೊಂಡ ಕರ್ತವ್ಯ ಪಥ್(ಹಿಂದೆ ರಾಜ್ ಪಥ್ ಎಂದು ಕರೆಯಲಾಗುತ್ತಿತ್ತು) ಮಾರ್ಗವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ ಪಥ್ ದಬ್ಬಾಳಿಕೆ ಮತ್ತು ಗುಲಾಮಗಿರಿಯ ಸಂಕೇತವಾಗಿದೆ. ಇಂದು ವಾಸ್ತುಶೈಲಿ ಬದಲಾಗಿದೆ. ಈಗ ಸಂಸದರು, ಸಚಿವರು ಕರ್ತವ್ಯದ ಹಾದಿಯಲ್ಲಿ ನಡೆದಾಗ ಅವರಿಗೆ ತಮ್ಮ ಕರ್ತವ್ಯದ ಪ್ರಜ್ಞೆ ಮೂಡುತ್ತದೆ ಎಂದು ಹೇಳಿದರು.