ಸರ್ಕಾರಿ ಶಾಲೆಗಳ ಬೆಲೆಬಾಳುವ ಜಾಗದ ಮೇಲೆ ಭೂಮಾಫಿಯಾ, ರಿಯಲ್ ಎಸ್ಟೇಟ್, ಕಣ್ಣು ಬಿದ್ದಿದ್ದು, ಕಬಳಿಸುವ ಹುನ್ನಾರ ಸದೆಬಡಿಯಲು ಸರ್ಕಾರ ಅಗತ್ಯ ಕ್ರಮವಹಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಬಿ.ಸಿ. ನಾಗೇಶ್ ಮಾತನಾಡಿದರು.
ಸರ್ಕಾರಿ ಶಾಲೆಗಳ ಜಾಗ ಸಂರಕ್ಷಣೆಗೆ ವ್ಯವಸ್ಥಿತ ದಾಖಲೀಕರಣ ಕಳೆದ ಮೂರು ತಿಂಗಳಿಂದ ಪ್ರಗತಿಯಲ್ಲಿದೆ. ಈಗಾಗಲೇ ಮೂರ್ನಾಲ್ಕು ಸಾವಿರ ಶಾಲೆಗಳ ದಾಖಲೀಕರಣ ಮುಗಿದಿದೆ. ಇನ್ನೂ ಏಳು ಸಾವಿರ ಶಾಲೆಗಳ ದಾಖಲೆಗಳ ಕ್ರೋಢೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.