ನೆರೆ ಸಂತ್ರಸ್ತರಿಗಾಗಿ ಕಂದಾಯ ಇಲಾಖೆಯಿಂದ 255 ಕೋಟಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ತಿಳಿಸಿದ್ದಾರೆ.
ಮಳೆ ಹಾನಿ ಕುರಿತ ವರದಿ ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಅನದಾನ ಕೋರಿ ಮನವಿ ಸಲ್ಲಿಸಲಾಗುತ್ತೆ. ಎನ್ಡಿಆರ್ಫ್ ಅಡಿ 1022.05 ಕೋಟಿ ಅನುದಾನ ಬರಬೇಕಿದೆ ಎಂದು ತಿಳಿಸಿದರು.
ಈಗಾಗಲೇ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ ನೀಡ್ತಿದ್ದಾರೆ. ಮಳೆಯಿಂದ ಮನೆಗಳಿಗೆ ಹಾನಿಯಾದರೆ ತಕ್ಷಣ ಪರಿಹಾರ ನೀಡಲಾಗುತ್ತದೆ. ರಾಜ್ಯದಲ್ಲಿ ಜೂನ್ನಿಂದ ಈವರೆಗೂ ಮಳೆಯಿಂದ 96 ಜನ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯೊಳಗೆ ರಾಮನಗರ, ಬಳ್ಳಾರಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 992 ಮನೆಗಳು ಹಾನಿಯಾಗಿವೆ. 10, 274 ಅರ್ಧ ಮನೆ ಹಾನಿಯಾಗಿವೆ. ನಿನ್ನೆ ಒಂದೇ ದಿನದಲ್ಲಿ 148 ಮನೆಗಳು ಹಾನಿಯಾಗಿದ್ದು, 258 ಪಶುಗಳು ಸಾವನ್ನಪ್ಪಿವೆ ಎಂದು ಹೇಳಿದರು.
ರಾಜ್ಯದಲ್ಲಿ 820 ಮಿಲಿಮೀಟರ್ ಮಳೆಯಾಗಿದೆ. ದಾವಣಗೆರೆ, ತುಮಕೂರು, ವಿಜಯಪುರ, ಮೈಸೂರು, ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದೆ. ಒಟ್ಟು 27 ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಮಳೆಯಾಗಿದೆ. ರಾಮನಗರ, ಮಂಡ್ಯದಲ್ಲಿ 9 ಮಿಲಿಮೀಟರ್ನಷ್ಟು ಮಳೆಯಾಗಿದೆ.
ಕಳೆದ 24 ಗಂಟೆಯಲ್ಲಿ 20 ಜಿಲ್ಲೆಯಲ್ಲಿ ಮಳೆ ಎಫೆಕ್ಟ್ ಆಗಿದೆ. 29, 967 ಜನರಿಗೆ ಸಮಸ್ಯೆ ಆಗಿದೆ. ಜುಲೈ ಮತ್ತು ಅಗಸ್ಟ್ ತಿಂಗಳಿನಲ್ಲಿ ಕೃಷಿ ಬೆಳೆ 3,100.83 ಹೆಕ್ಟೇರ್, ತೋಟಗಾರಿಕಾ ಬೆಳೆ 201.95 ಹೆಕ್ಟೇರ್, ಬಹುವಾರ್ಷಿಕ ಬೆಳೆ 265.51 ಹೆಕ್ಟೇರ್, ಮೆಕ್ಕಲು ಮತ್ತು ಕೃಷಿ ಭೂಮಿ 0.84 ಹೆಕ್ಟೇರ್ ಮತ್ತು ರೇಷ್ಮೆ ಬೆಳೆ 0.13 ಹೆಕ್ಟೇರ್ನಷ್ಟು ಭೂಮಿ ನಾಶವಾಗಿದೆ. 467 ಜಾನುವಾರುಗಳು ಸಾವನ್ನಪ್ಪಿವೆ. 24,408 ಮನೆಗಳು ಹಾನಿಯಾಗಿವೆ. 22,734 ಕಿ.ಮೀ ರಸ್ತೆ ಹಾನಿಯಾಗಿದ್ದು, ಇದರಲ್ಲಿ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳು 4159 ಕಿ.ಮೀ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.