ಬನವಾಸಿ , ಉತ್ತರ ಕನ್ನಡ
ಬನವಾಸಿ ಎಂದಾಕ್ಷಣ ಕನ್ನಡಿಗರ ಕಣ್ಮನದಲ್ಲಿ ನಿಲ್ಲುವುದು ಕನ್ನಡದ ಆದಿಕವಿ ಪಂಪನ ಚಿತ್ರ. “ಆರಂಕುಸವಿಟ್ಟೊಡಂ, ನೆನೆವುದೆನ್ನ ಮನಂ ಬನವಾಸಿ ದೇಶಮಂ” ಇದು ಪಂಪನ ಕಾವ್ಯದ ಪ್ರಖ್ಯಾತ ಸಾಲು. ಬನವಾಸಿ ಕದಂಬರ ಮೂಲ ಸ್ಥಳ ಹಾಗೂ ರಾಜಧಾನಿ. ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಕನ್ನಡ ರಾಜ್ಯೋತ್ಸವವು ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜು ಮಕ್ಕಳು, ಕಿತ್ತೂರು ರಾಣಿ ಚೆನ್ನಮ್ಮ, ಡಾಕ್ಟರ್ ಬಿ.ಆರ್ ಅಂಬೇಡ್ಕರ್, ಒನಕೆ ಓಬವ್ವ, ಟಿಪ್ಪು ಸುಲ್ತಾನ್, ಸೇರಿದಂತೆ ಹಲವಾರು ದೇಶಭಕ್ತರ ಹಾಗೂ ಮಹಾನ್ ವ್ಯಕ್ತಿಗಳ ವೇಷಭೂಷಣ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಯಕ್ಷಗಾನ, ಡೊಳ್ಳುಕುಣಿತ ಸೇರಿದಂತೆ ಮುಂತಾದ ಮಾತುಗಳಿಂದ ಕೂಡಿದ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.