ಮುಸ್ಲಿಂ ಧಾರ್ಮಿಕ ಶಿಕ್ಷಣ ಕೇಂದ್ರಗಳ ನಿಯಂತ್ರಣಕ್ಕೆ ಮಂಡಳಿ ರಚನೆ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸಭೆ ನಡೆಸಿ ಚರ್ಚೆ ಕೂಡ ಮಾಡಲಾಗಿದೆ. ಸದ್ಯ ಈಗ ಎಲ್ಲಾ ಇಲಾಖೆಗಳಿಗೂ ಸಮಿತಿ ಮಾಡಿದ್ದೇವೆ. ಅದೇ ರೀತಿ ರಾಜ್ಯದ ಮದರಸಾಗಳಿಗೂ ಸಮಿತಿ ರಚಿಸುತ್ತೇವೆ ಎಂದು ಪ್ರಾಥಮಿಕ & ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಮದರಸಾಗಳಲ್ಲೂ NEP ಜಾರಿಯಾಗಲಿದೆ. ಅಂತ್ಯದಲ್ಲಿರುವ ಕಟ್ಟಕಡೆಯ ಮಗುವಿಗೂ ಶಿಕ್ಷಣ ತಲುಪಬೇಕು. ಮದರಸಾದಿಂದ ಮಕ್ಕಳು ಬೇರೆ ಮಕ್ಕಳ ಮಟ್ಟಕ್ಕೆ ಕಾಂಪೀಟ್ ಮಾಡಲಾಗ್ತಿಲ್ಲ. ಎಲ್ಲಾ ಇಲಾಖೆಗೂ ಸಮಿತಿ ಮಾಡಿದ್ದೇವೆ, ಅದೇ ರೀತಿ ಮದರಸಾಗೂ ಮಾಡಿದ್ದೇವೆ. ನಮ್ಮ ಅಧಿಕಾರಿಗಳು ಶಾಲೆಗಳನ್ನು ಹೇಗೆ ಪರಿಶೀಲನೆ ಮಾಡಬೇಕು ಎಂಬ ನಿಯಮವಿದೆ. ಅದೇ ರೀತಿ ಮದರಸಾಗಳನ್ನು ಪರಿಶೀಲಿಸ್ತಾರೆ ಎಂದರು.