ಬಹುತೇಕ ರಾಷ್ಟ್ರಗಳಲ್ಲಿ ಕೊರೋನಾ ನಿರೋಧಕ ಲಸಿಕೆ ಅಭಿಯಾನ ನಡೆಯುತ್ತಿದ್ದರೂ ಜಗತ್ತಿನಾದ್ಯಂತ ಕೊರೋನಾಗೆ ಬಲಿಯಾಗುತ್ತಿರುವ ವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಭಾರತ ಸೇರಿ ಇತ್ತೀಚಿಗೆ ಕೆಲವು ರಾಷ್ಟ್ರಗಳಲ್ಲಿ ನಿತ್ಯ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 12,514 ಕೊರೋನಾ ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,58,817ಕ್ಕೆ ಇಳಿಕೆಯಾಗಿದೆ. ಇದು ಎರಡು 248 ದಿನಗಳಲ್ಲಿಯೇ ಕನಿಷ್ಠವಾಗಿದೆ. ಇನ್ನು ದೇಶದಲ್ಲಿ ಕೊರೋನಾ ಸೋಂಕಿನಿಂದ ಒಂದೇ ದಿನ 151 ಮೃತ ಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಮಾಹಿತಿ ನೀಡಿದೆ.
ಕೊರೋನಾ ನಿರೋಧಕ ಲಸಿಕೆ, ಜನ ಜಾಗೃತಿ ಸೇರಿ ಹಲವು ಕಾರಣಗಳಿಂದಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಸೋಂಕಿನ ವೇತಿ ತಗ್ಗಿದ್ದರೂ, ಇತ್ತೀಚಿಗೆ ರಷ್ಯಾ, ಉಕ್ರೇನ್, ಪೂರ್ವ ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ಮತ್ತೊಂದೆಡೆ ಲಸಿಕೆಯ ಶೀಘ್ರ ವಿತರಣೆಯಾಗದಿರುವುದು ಹಲವು ರಾಷ್ಟ್ರಗಳಿಗೆ ಮಾರಕವಾಗಿದೆ.
ಲಸಿಕೆಯ ಬಲವಿದ್ದರೂ ಜಗತ್ತಿನ ಅತ್ಯಂತ ಕೊರೊನಾ ವಿರುದ್ಧದ ಹೋರಾಟಕ್ಕೆ ಹಲವಾರು ಸವಾಲುಗಳಿವೆ. ಲಸಿಕೆ ವಿತರಣೆ, ಬೂಸ್ಟರ್ ಡೋಸ್, ಮಕ್ಕಳಿಗೆ ಲಸಿಕೆ ನೀಡಿಕೆ ಜೊತೆಗೆ ರೂಪಾಂತರಗಳ ಹಾವಳಿಯ ಭೀತಿ ಹೆಚ್ಚಿಸಿದೆ. ಇತ್ತೀಚಿಗಷ್ಟೇ ವ್ಯಾಪಿಸಿದ ₹2 ಇದಕ್ಕೆ ನಿದರ್ಶನವಾಗಿದೆ.
ಅಮೇರಿಕ, ಐರೋಪ್ಯ ಒಕ್ಕೂಟ, ಬ್ರಿಟನ್, ಬ್ರೆಜಿಲ್ ನಂತಹ ಮುಂದುವರೆದ ರಾಷ್ಟ್ರಗಳಲ್ಲಿ ಜಗತ್ತಿನ ಒಟ್ಟು ಸಾವಿನ ಪ್ರಮಾಣದಲ್ಲಿ 8ನೇ ಒಂದರಷ್ಟು ಪಾಲು ಹೊಂದಿವೆ. ಭಾರತವು ವಿಶ್ವದಲ್ಲಿ ಹೆಚ್ಚು ಸಾವು ಸಂಭವಿಸಿದ ರಾಷ್ಟ್ರಗಳ ಸಾಲಿನಲ್ಲಿದೆ.
ಚೀನಾದಲ್ಲಿ 2019ರ ನವೆಂಬರ್ ನಲ್ಲಿ ಕೊರೋನಾ ಮೊದಲ ಪ್ರಕರಣ ದಾಖಲಾಗಿತ್ತಲ್ಲದೆ, ಆ ದೇಶದಲ್ಲಿಯೇ 2020 ರ ಜನವರಿ 11 ರಂದು ಮೊದಲ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದರು. ಇದಾದ ಬಳಿಕ ಜಗತ್ತಿನಾದ್ಯಂತ ವಿಸ್ತರಿಸಿದ ಸೋಂಕಿನಿಂದ ಬಲಿಯಾದವರ ಸಂಖ್ಯೆ 50 ಲಕ್ಷ ದಾಟಿದೆ. ಭಾರತದಲ್ಲಿ ಮೊದಲ ಪ್ರಕರಣ 2020 ರ ಜನವರಿ 27ರಂದು ಕೇರಳದಲ್ಲಿ ದಾಖಲಾಗಿದೆ. ಅಲ್ಲದೆ, ದೇಶದಲ್ಲಿಯೇ ಕರ್ನಾಟಕದಲ್ಲಿ ಮೊದಲ ಸಾವು ದಾಖಲಾಗಿದೆ. ಕಲಬುರ್ಗಿಯಲ್ಲಿ ಮಾರ್ಚ್ 10ರಂದು 76 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೋವಿಡ್ 19: ಜಾಗತಿಕ ಸಾವಿನ ಸಂಖ್ಯೆ 50 ಲಕ್ಷ
Date: