Monday, March 3, 2025
Monday, March 3, 2025

ಕಾರ್ಮಿಕರ ಕೆಲಸದ ಸ್ಥಳದಲ್ಲಿ ಸಂಚಾರಿ ವೈದ್ಯಕೀಯ ಘಟಕ ಸೌಲಭ್ಯ

Date:

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳ ನಿಯಮಗಳಿಗೆ ಸರ್ಕಾರ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದೆ.

ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಸಂಚಾರಿ ವೈದ್ಯಕೀಯ ಘಟಕ ಸ್ಥಾಪನೆ, ಅವಶ್ಯವಿರುವಾಗ ಪೌಷ್ಟಿಕ ಆಹಾರ ಕಿಟ್ ವಿತರಿಸಲಾಗುವುದು.
ಹೆರಿಗೆ ಸೌಲಭ್ಯ ಸಹಾಯಧನವನ್ನು 50,000 ರೂ.ಗೆ ಹೆಚ್ಚಳ ಮಾಡಲಾಗಿದೆ.

ಅಂತಿಮ ಸಂಸ್ಕಾರ ವೆಚ್ಚ ಸೌಲಭ್ಯ ಸಹಾಯಧನವನ್ನು 50 ಸಾವಿರ ರೂ.ನಿಂದ 71,000 ರೂ.ಗೆ ಹೆಚ್ಚಳ ಮಾಡಲಾಗಿದೆ.
ಕೋವಿಡ್ ನಿಂದ ಫಲಾನುಭವಿ ಮೃತಪಟ್ಟಲ್ಲಿ ಅವಲಂಬಿತರಿಗೆ 2 ಲಕ್ಷ ರೂ. ಸಹಾಯಧನ ನೀಡಲಾಗುವುದು.
ಸಾರಿಗೆ ಸೌಲಭ್ಯದಡಿ ಫಲಾನುಭವಿಗಳಿಗೆ ರಾಜ್ಯಾದ್ಯಂತ ಕೆಎಸ್‌ಆರ್ಟಿಸಿ ಬಸ್ ಪಾಸ್ ನೀಡಲಾಗುವುದು.

ಗೃಹಭಾಗ್ಯ ಸೌಲಭ್ಯದಡಿ 21 ರಿಂದ 50 ವರ್ಷದ ನೋಂದಾಯಿತ ಫಲಾನುಭವಿಗಳಿಗೆ ಮನೆ ನಿರ್ಮಿಸಲು 10 ಕಂತುಗಳಲ್ಲಿ ಸಾಲ ನೀಡಲು ನಿಯಮ ಸರಳಿಕರಣ ಮಾಡಲಾಗಿದೆ.

ಪಿಂಚಣಿ ಸೌಲಭ್ಯವನ್ನು 2000 ರೂ.ನಿಂದ 3000 ರೂ.ಗೆ ಏರಿಕೆ ಮಾಡಲಾಗಿದೆ.
ಫಲಾನುಭವಿಗಳ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತರಬೇತಿ, ಕಲಿಕಾ ಕಿಟ್, ಕಂಪ್ಯೂಟರ್, ಲ್ಯಾಪ್ಟಾಪ್ ಲ್ಯಾಬ್ ವಿತರಿಸಲಾಗುವುದು.
ವೈದ್ಯಕೀಯ ಸೌಲಭ್ಯ ಯೋಜನೆಯಡಿ ಸಹಾಯಧನವನ್ನು 10 ಸಾವಿರ ರೂ.ನಿಂದ 20 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ.

ಫಲಾನುಭವಿಗಳು ಕೆಲಸದ ಸ್ಥಳದಲ್ಲಿ ಅಪಘಾತದಿಂದ ಮೃತಪಟ್ಟರೆ ಅವಲಂಬಿತರಿಗೆ ಪರಿಹಾರದ ಮೊತ್ತವನ್ನು 2 ಲಕ್ಷದಿಂದ 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.
ಮದುವೆ ಸಹಾಯಧನ ಮೊತ್ತವನ್ನು 50 ರಿಂದ 60,000 ರೂ.ಗೆ ಹೆಚ್ಚಳ ಮಾಡಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bhadravati Police ಭದ್ರಾವತಿಯಿಂದ ನಾಪತ್ತೆಯಾಗಿರುವ ವ್ಯಕ್ತಿಯ ಬಗ್ಗೆ ಪೊಲೀಸ್ ಪ್ರಕಟಣೆ

Bhadravati Police ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿರುವ ಸುಮಾರು...

Shubhamangal Kalyan Mandira ಸಮಾಜ ಸೇವಕ ವಿನಾಯಕ್ ಬಾಯರಿ ನಿಧನ

Shubhamangal Kalyan Mandira ಶಿವಮೊಗ್ಗದ ವಿನಾಯಕ್ ಬಾಯರಿ(47) ರವರು ಇಂದು...

Forest Department ರಸ್ತೆ ಅಗಲೀಕರಣ ಬಗ್ಗೆ ಮರಗಳ ಕಡಿತಲೆ, ಆಯನೂರು ಅರಣ್ಯ ಉಪವಿಭಾಗದಲ್ಲಿ ಸಾರ್ವಜನಿಕರ ಅಹವಾಲಿಗೆ ಅವಕಾಶ

Forest Department ಅರಣ್ಯ ಇಲಾಖೆ ಆಯನೂರು ಉಪವಿಭಾಗದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ...

Annabhagya Yojana ಫೆಬ್ರವರಿ 2025 ರಿಂದ ಜಾರಿಗೆ ಬರುವಂತೆ ಮಾರ್ಚ್2025 ರ ಮಾಹೆಯ ಪಡಿತರದಲ್ಲಿ 5 ಕೆಜಿ ಅಕ್ಕಿ ಸೇರಿಸಿ ವಿತರಣೆ- ಗುರುದತ್ತ ಹೆಗಡೆ

Annabhagya Yojana ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಮತ್ತು...