ತೈವಾನ್ ಮೇಲೆ ಚೀನಾ ಕ್ಷಿಪಣಿ ದಾಳಿ ನಡೆಸಿರುವ ಬೆನ್ನಲ್ಲೇ ಜಪಾನ್‍ನ ವಿಶೇಷ ಆರ್ಥಿಕ ವಲಯದೊಳಗೆ 5 ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಪಾನಿನ ರಕ್ಷಣಾ ಸಚಿವ ನೊಬುವೊ ಕಿಶಿ, ಚೀನಾ ಉಡಾವಣೆ ಮಾಡಿದ್ದ 9 ಕ್ಷಿಪಣಿಗಳಲ್ಲಿ 5 ಜಪಾನ್‍ನ ವಿಶೇಷ ಆರ್ಥಿಕ ವಲಯದೊಳಗೆ ಬಂದಿದೆ.
ಇದರಿಂದಾಗಿ ನಮ್ಮ ದೇಶದ ಭದ್ರತೆ ಮತ್ತು ಜನರ ಜನರ ಸುರಕ್ಷತೆಗೆ ಗಂಭೀರ ಸಮಸ್ಯೆಯಾಗಿದೆ ಎಂದಿದ್ದಾರೆ.
ಜಪಾನ್‍ನ ದಕ್ಷಿಣದ ದ್ವೀಪ ಪ್ರದೇಶದ ಓಕಿನಾವಾವು ತೈವಾನ್‍ಗೆ ಹತ್ತಿರದಲ್ಲಿವೆ. ಈ ಹಿನ್ನೆಲೆಯಲ್ಲಿ ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಜಪಾನ್‍ನ ವಿಶೇಷ ಆರ್ಥಿಕ ವಲಯದ ಮೇಲೆ ಬಿದ್ದಿರುವುದು ಇದೇ ಮೊದಲ ಬಾರಿಗೆ ಎಂದು ಹೇಳಿದ್ದಾರೆ.