ಕರ್ನಾಟಕ ಆಡಳಿತ ಸುಧಾರಣಾ ಆಯೋಗ -2ರ ಶಿಫಾರಸು ಹಾಗೂ ಕೇಂದ್ರ ಸರ್ಕಾರದ ನಿರ್ದೇಶನ ನಿಯಮಾವಳಿಗಳನ್ವಯ ಆಯ್ದ 30 ಪ್ರಮುಖ ಸೇವೆಗಳನ್ನು ಆನ್ ಲೈನ್ ನಲ್ಲೇ ಜನರಿಗೆ ಒದಗಿಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ. ಎನ್ಐಸಿ ಸಹಯೋಗದಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸುವ ಕಾರ್ಯ ನಡೆಯುತ್ತಿದೆ. ಸದ್ಯದಲ್ಲೇ ಅಂತಿಮ ರೂಪ ಪಡೆಯಲಿದ್ದು, ಭ್ರಷ್ಟಾಚಾರ ಮುಕ್ತ ಸೇವೆ ಸಿಗುವ ನಿರೀಕ್ಷೆ ಮೂಡಿಸಿದೆ.
ಸಾರಿಗೆ ಇಲಾಖೆ ಸೇವೆಯನ್ನು ಸಾಧ್ಯವಾದಷ್ಟು ಸುಲಭ, ಸರಳ ಹಾಗೂ ಭ್ರಷ್ಟಾಚಾರ ಮುಕ್ತವಾಗಿ ಒದಗಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನ ನಡೆಸಲಾಗುತ್ತಿದೆ. “
ಆಡಳಿತ ಸುಧಾರಣಾ ಆಯೋಗ-2ರ ಶಿಫಾರಸು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಆಯ್ದ 30 ಸೇವೆಗಳನ್ನು ಆನ್ ಲೈನ್ ಮೂಲಕ ಒದಗಿಸಲು ಪ್ರಯತ್ನ ನಡೆದಿದೆ “ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಾರಿಗೆ ಇಲಾಖೆಯು 47 ಬಗೆಯ ಸೇವೆ ಒದಗಿಸುತ್ತಿದೆ. ಸಾರಿಗೆ ಇಲಾಖೆ ಸೇವೆಗಾಗಿ ವರ್ಷವಿಡಿ 50 ಲಕ್ಷಕ್ಕೂ ಹೆಚ್ಚು ಜನ ಕಚೇರಿಗೆ ಭೇಟಿ ನೀಡುತ್ತಾರೆ ಎಂಬ ಅಂದಾಜು ಇದೆ. ಇಷ್ಟು ಜನರ ಸಮಯ, ಸಂಚಾರ, ವೆಚ್ಚಕ್ಕೆ ತಡೆ ಹಾಕಿ ಆಯ್ದ ಸೇವೆಗಳನ್ನು ಕುಳಿತಲ್ಲೇ ಪಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪ್ರಯತ್ನಕ್ಕೆ ಮುಂದಾಗಿದೆ.
ವಾಹನದ ನೋಂದಣಿ ಪ್ರಮಾಣ ಪತ್ರದ (ಆರ್.ಸಿ) ಜೊತೆಗೆ ನೊಂದಣಿ ಸಂಖ್ಯೆ ಹಂಚಿಕೆ, ತಾತ್ಕಾಲಿಕ ನೊಂದಣಿ, ವಾಹನಗಳ ವರ್ಗಾವಣೆ, ಆರ್. ಸಿ ನಕಲು ಪ್ರತಿ, ಪ್ರಮಾಣಪತ್ರದಲ್ಲಿ ಬದಲಾವಣೆ, ಕಲಿಕೆ ಚಾಲನಾ ಪರವಾನಗಿ (ಎಲ್.ಎಲ್.) ವಿತರಣೆ, ಎಲ್.ಎಲ್.ನಲ್ಲಿ ಹೆಸರು ಅಥವಾ ವಿಳಾಸ ಬದಲಾವಣೆ, ಕಂಡಕ್ಟರ್ ಪರವಾನಗಿ /ನವೀಕರಣ ಸೇರಿದಂತೆ 5:30 ಸೇವೆಗಳು ನವೆಂಬರ್ ಒಂದರಿಂದ ಆನ್ ಲೈನ್ ನಲ್ಲಿ ಲಭ್ಯವಾಗಲಿವೆ.
ರಾಜ್ಯದ ಸಾರಿಗೆ ಸೇವೆ : ನಂ.1ರಿಂದ ಆನ್ ಲೈನ್ ಆಗಲಿದೆ
Date: