ಕೇಂದ್ರ ಸರ್ಕಾರದಿಂದ ದಿನೇ ದಿನೇ ಹುಡುಕಿ ಹುಡುಕಿ ಅಗತ್ಯ ವಸ್ತುಗಳ ಮೇಲೆ ತೆರಿಗೆ ಹಾಕುತ್ತಾ ಇದ್ದಾರೆ. ಇದೇ ಕಾರಣದಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುವಂತೆ ಆಗಿದೆ. ಅಲ್ಲಾ ಮಂಡಕ್ಕಿ ಮೇಲೆ ಯಾರಾದ್ರು ತೆರಿಗೆ ಹಾಕ್ತಾರಾ ಎಂಬುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಸರ್ಕಾರದ ಸಾಧಾನ ರಿಪೋರ್ಟ್ ಬಿಡುಗಡೆ ಮಾಡಿದ ಬಳಿಕ ಮಾತನಾಡಿದಂತ ಅವರು, ಕೇಂದ್ರ ಸರ್ಕಾರ ಜಿಎಸ್ಟಿ ಹೆಸರಿನಲ್ಲಿ ಬಡವರ ರಕ್ತ ಕುಡಿಯೋ ಕೆಲಸ ಮಾಡುತ್ತಿದೆ. ಜಿಎಸ್ಟಿ ಹಾಕಿದ್ದರಿಂದಲೇ ಅಗತ್ಯವಸ್ತುಗಳ ಬೆಲೆ ಗಗನಕ್ಕೆ ಏರುತ್ತಿವೆ.ಜನರು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ತತ್ತರಿಸಿ ಹೋಗುವಂತೆ ಆಗಿದೆ ಎಂದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಿಧಾನಸೌಧ ವ್ಯಾಪರಸೌಧ ಆಗಿದೆ. ದಿನೇ ದಿನೇ ಬ್ರಹ್ಮಾಂಡ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ದೇಶದಲ್ಲಿ ಐಪಿಎಸ್ ಅಧಿಕಾರಿ ಬಂಧನವಾಗಿದ್ದು ರಾಜ್ಯದಲ್ಲೇ ಆಗಿದೆ. ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ರಾಜಕಾರಣಿಗಳು ಭಾಗಿಯಾಗಿಲ್ವಾ.? ಬರೀ ಅಭ್ಯರ್ಥಿಗಳು, ಅಧಿಕಾರಿಗಳೇನಾ ಎಂಬುದಾಗಿ ಪ್ರಶ್ನಿಸಿದರು