ತಂದೆಯೊಬ್ಬರು ಮಗಳಿಗೆ ಜೀವನಾಂಶ ನೀಡಿದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೆಣ್ಣುಮಕ್ಕಳು ಯಾರಿಗೂ ಹೊರೆಯಾಗುವುದಿಲ್ಲ ಎಂದು ತಿಳಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ಪೀಠವು ಶುಕ್ರವಾರ ತಂದೆಯ ಪರ ವಕೀಲರು ಮಹಿಳೆ ಹೊರೆಯಾಗಿದ್ದಾಳೆ ಎಂದು ಹೇಳಿದ ಬಳಿಕ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಂವಿಧಾನದ 14ನೇ ವಿಧಿಯನ್ನು ಉಲ್ಲೇಖಿಸುವಾಗ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಅನುಚ್ಛೇದವು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಖಾತರಿಪಡಿಸುತ್ತದೆ. ಈ ಪ್ರಕರಣದಲ್ಲಿ, ಸಂಬಂಧಪಟ್ಟ ಮಗಳು ವಕೀಲೆಯಾಗಿದ್ದಾಳೆ. ಅವಳು ನ್ಯಾಯಾಂಗ ಸೇವೆಯ ಪ್ರಾಥಮಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ ಎಂದು ಶುಕ್ರವಾರ ನ್ಯಾಯಪೀಠಕ್ಕೆ ತಿಳಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಮಹಿಳೆ ತನ್ನ ತಂದೆಯ ಮೇಲೆ ಅವಲಂಬಿತವಾಗದಂತೆ ತನ್ನ ಪರೀಕ್ಷೆಯ ಮೇಲೆ ಗಮನ ಹರಿಸಬೇಕು ಎಂದು ಹೇಳಿದೆ.
ಆಗಸ್ಟ್ ವೇಳೆಗೆ ಮಗಳಿಗೆ 50,000 ರೂ.ಗಳನ್ನು ಪಾವತಿಸುವಂತೆ ನ್ಯಾಯಪೀಠವು ತಂದೆಗೆ ಆದೇಶಿಸಿದೆ