Sunday, October 11, 2026
Sunday, October 11, 2026

ರಸ್ತೆಯಲ್ಲಿ ಸಿಕ್ಕ ₹ 45 ಲಕ್ಷ ಠಾಣೆಗೆ ವಾಪಸ್ ನೀಡಿದ ಪೋಲಿಸ್ ಅಧಿಕಾರಿ

Date:

45 ಲಕ್ಷ ರೂ. ಹಣವಿರುವ ಇರುವ ಬ್ಯಾಗೊಂದು ನಿನ್ನೆ ಶನಿವಾರ ಸಂಚಾರಿ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಸಿಕ್ಕಿದೆ. ಆ ಬ್ಯಾಗನ್ನು ಸ್ಥಳೀಯ ಪೊಲೀಸ್‌ ಠಾಣೆಗೆ ಹಸ್ತಾಂತರಿಸುವ ಮುಖಾಂತರ ತಮ್ಮ ಪ್ರಾಮಾಣಿಕತೆ ಮೆರೆದಿರುವ ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆದಿದೆ.

ನವ ರಾಯ್‌ಪುರದ ಕಯಾಬಂಧ ಪೋಸ್ಟ್‌ಗೆ ನೀಮಿಸಲಾದ ಟ್ರಾಫಿಕ್ ಕಾನ್‌ಸ್ಟೆಬಲ್ ನಿಲಂಬರ್ ಸಿನ್ಹಾ ಅವರು ನಿನ್ನೆ ಶನಿವಾರ ಬೆಳಿಗ್ಗೆ ಮಾನಾ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯೊಂದರಲ್ಲಿ ಬ್ಯಾಗ್‌ಅನ್ನು ಕಂಡುಕೊಂಡಿದ್ದಾರೆ.

ಬಳಿಕ, ಬ್ಯಾಗ್‌ ನ್ನು ಪರಿಶೀಲಿಸಿದಾಗ ಅದರೊಳಗೆ ಸುಮಾರು 2000 ಮತ್ತು 500 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಿವಿಲ್ ಲೈನ್ಸ್ ಠಾಣೆಗೆ ಬ್ಯಾಗ್‌ಅನ್ನು ನೀಡಿದ್ದಾರೆ.

ಬ್ಯಾಗ್‌ನಲ್ಲಿದ್ದ ಹಣವನ್ನು ಲೆಕ್ಕ ಹಾಕಿದಾಗ ಬರೋಬ್ಬರಿ 45 ಲಕ್ಷ ರೂ. ಹಣವಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಖನಂದನ್ ರಾಥೋರ್ ಅವರು ಮಾಹಿತಿ ನೀಡಿದ್ದಾರೆ.

ಈ ಪ್ರಾಮಾಣಿಕತೆಗಾಗಿ ಸಿನ್ಹಾ ಅವರಿಗೆ ಹಿರಿಯ ಅಧಿಕಾರಿಗಳು ಬಹುಮಾನವನ್ನು ಘೋಷಿಸಿದ್ದಾರೆ. ಇನ್ನೂ, ನಗದು ಮೂಲವನ್ನು ಕಂಡುಹಿಡಿಯಲು ಸಿವಿಲ್ ಲೈನ್ಸ್ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...