Sunday, August 23, 2026
Sunday, August 23, 2026

ಉಕ್ರೇನಿಗೆ ಅಮೆರಿಕಾದಿಂದ ಹೆಚ್ಚುವರಿ ಭದ್ರತಾ ನೆರವು

Date:

ಅಮೆರಿಕವು ಯುದ್ಧಪೀಡಿತ ಉಕ್ರೇನ್‌ಗೆ ಮತ್ತಷ್ಟು ರಾಕೆಟ್‌ ಲಾಂಚರ್‌ಗಳು ಸೇರಿದಂತೆ ₹ 21,566 ಕೋಟಿ ಮೌಲ್ಯದ ಹೆಚ್ಚುವರಿ ಭದ್ರತಾ ನೆರವನ್ನು ನೀಡಲಿದೆ ಎಂದು ಶ್ವೇತಭವನ ಪ್ರಕಟಿಸಿದೆ.

ಉಕ್ರೇನ್‌ ಮೇಲೆ ಆಕ್ರಮಣ ಮುಂದುವರಿಸಿರುವ ರಷ್ಯಾ ಪಡೆಗಳಿಗೆ ಮೊಬೈಲ್‌ ರಾಕೆಟ್‌ ಲಾಂಚರ್‌ಗಳು ತೀವ್ರ ಹಾನಿಯನ್ನುಂಟುಮಾಡಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೈಡನ್‌ ಸರ್ಕಾರ ಉಕ್ರೇನ್‌ಗೆ ಈವರೆಗೆ ₹ 6.54 ಲಕ್ಷ ಕೋಟಿ ಮೌಲ್ಯದ ರಕ್ಷಣಾ ನೆರವು ನೀಡಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ಯಾಕೇಜ್‌ ಘೋಷಿಸಲಾಗುವುದು ಎಂದಿರುವ ಕರ್ಬಿ, ‘ಉಕ್ರೇನ್ ಸರ್ಕಾರ ಮತ್ತು ಅಲ್ಲಿನ ಜನರಿಗೆ ಅಗತ್ಯವಿರುವ ತನಕ ಬೆಂಬಲ ಮುಂದುವರಿಸುವುದಾಗಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ’ ಎಂದೂ ತಿಳಿಸಿದ್ದಾರೆ.

ರಾಷ್ಟ್ರೀಯ ರಕ್ಷಣಾ ಮಂಡಳಿಯ ವಕ್ತಾರ ಜಾನ್‌ ಕಿರ್ಬಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಧ್ಯಕ್ಷ ಜೋ ಬೈಡನ್‌ ಆಡಳಿತವು ಹೆಚ್ಚುವರಿಯಾಗಿ ನಾಲ್ಕು ಟ್ರಕ್-ಮೌಂಟೆಡ್ ರಾಕೆಟ್ ಲಾಂಚರ್‌ಗಳು, ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್ಸ್‌, ಡ್ರೋಣ್‌ಗಳನ್ನು ರವಾನಿಸಲಿದೆ ಎಂದು ತಿಳಿಸಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರು ಉಕ್ರೇನ್‌ನಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಲು ಫೆಬ್ರುವರಿ 24ರಂದು ಕರೆ ನೀಡಿದ್ದರು. ರಷ್ಯಾ ಪಡೆಗಳು ಅಂದಿನಿಂದಲೂ ಆಕ್ರಮಣ ಮುಂದುವರಿಸಿದ್ದು, ಉಕ್ರೇನ್‌ ಸೇನೆಯೂ ಪ್ರತಿದಾಳಿ ನಡೆಸುತ್ತಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar 500 ಕೆಪಿಎಸ್ ಶಾಲೆಗಳನ್ನ ಸಮಗ್ರ ಉನ್ನತೀಕರಿಸುವ “ಶಿಕ್ಷಣ ಕ್ರಾಂತಿ-2030″ಯೋಜನೆಗೆ ಹೆಜ್ಜೆಯಿಟ್ಟಿದ್ದೇವೆ,- ಡಿ.ಕೆ.ಶಿವಕುಮಾರ್.

D.K. Shivakumar ನಮ್ಮ ಹಳ್ಳಿಯ ಮಣ್ಣಿನ ಪ್ರತಿಭೆಗಳು ವಿಶ್ವದಂಗಳದಲ್ಲಿ ರಾರಾಜಿಸಬೇಕು, ಅವರಿಗೆ ಅತ್ಯುನ್ನತ...

B.Y. Raghavendra “ಸರ್ಕಾರಿ ಶಾಲೆಗೆ ನೀವು ಸಲ್ಲಿಸಿರುವ ಅಪಾರಸೇವೆಗೆ ದೊರೆತ ಅರ್ಹ ಗೌರವ”- ಬಿ.ವೈ.ರಾಘವೇಂದ್ರ.

B.Y. Raghavendra ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ...

Shivamogga News ಹರಕೆರೆ ರಿಂಗ್ ರಸ್ತೆಯಲ್ಲಿ ದರೋಡೆ ಮಾಡಿದ್ದ ಖದೀಮರು ಈಗ ‘ಅಂದರ್’.

Shivamogga News ಹರಕೆರೆ ರಿಂಗ್‌ರೋಡ್‌ನಲ್ಲಿ ಸಾರ್ವಜನಿಕರನ್ನು ಬೆದರಿಸಿ, ಹಲ್ಲೆ ನಡೆಸಿ ಹಣ...

D. Devaraj Arasu ದೇವರಾಜ ಅರಸು ಅವರಿಗೆ ನಮ್ಮರೈತರು ಚಿರ ಋಣಿಯಾಗಿರಬೇಕು – ಬಿ.ಆರ್.ಜಯಂತ್.

D. Devaraj Arasu  1974ರ ಭೂ ಸುಧಾರಣಾ ಕಾಯ್ದೆಗೆ ಐತಿಹಾಸಿಕ ಮಹತ್ವವಿದ್ದು,...