ಪೂರ್ವ ಲಡಾಖ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟು ಮುಕ್ತಾಯಕ್ಕೆ ಚೀನಾ ನಿಯಮ ಪಾಲಿಸಬೇಕು. ಎರಡೂ ರಾಷ್ಟ್ರಗಳ ನಡುವೆ ಸುಗಮ ಬಾಂಧವ್ಯ ಮುಂದುವರಿಯಬೇಕಾದರೆ ಇಂಥ ನಿರ್ಣಯ ಅನಿವಾರ್ಯ
ಎಂದು ಚೀನಾ ವಿದೇಶಾಂಗ ಸಚಿವರಿಗೆ ಕೇಂದ್ರ ವಿದೇಶಾಂಗ ಸಚಿವ ಎಸ್.
ಜೈಶಂಕರ್ ಅವರು ಎಚ್ಚರಿಸಿದರುಪೂರ್ವ ಲಡಾಖ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟು ಮುಕ್ತಾಯಕ್ಕೆ ಚೀನಾ ನಿಯಮ ಪಾಲಿಸಬೇಕು. ಎರಡೂ ರಾಷ್ಟ್ರಗಳ ನಡುವೆ ಸುಗಮ ಬಾಂಧವ್ಯ ಮುಂದುವರಿಯಬೇಕಾದರೆ ಇಂಥ ನಿರ್ಣಯ ಅನಿವಾರ್ಯ
ಎಂದು ಚೀನಾ ವಿದೇಶಾಂಗ ಸಚಿವರಿಗೆ ಕೇಂದ್ರ ವಿದೇಶಾಂಗ ಸಚಿವ ಎಸ್.
ಜೈಶಂಕರ್ ಅವರು ಎಚ್ಚರಿಸಿದರು.
ಪೂರ್ವ ಲಡಾಖ್‌ನ ಕೆಲವು ಪ್ರದೇಶಗಳಿಂದ ಎರಡೂ ದೇಶಗಳ ಸೇನೆ ವಾಪಸಾಗಿದೆ. ಇನ್ನುಳಿದ ಪ್ರದೇಶ ಗಳಿಂದ ಆ ಪ್ರಕ್ರಿಯೆ ಬಾಕಿ ಉಳಿದಿದೆ. ಎರಡೂ ದೇಶಗಳ ನಡುವೆ ಐತಿಹಾಸಿಕವಾಗಿ ಇರುವ ಬಾಂಧವ್ಯ ಸುಗಮ ವಾಗಿ ಮುಂದುವರಿಯುವ ನಿಟ್ಟಿನಲ್ಲಿ ಚೀನ ದ್ವಿಪಕ್ಷೀಯ ಬಾಂಧವ್ಯಗಳನ್ನು ಗೌರವಿಸಿ, ಗಡಿ ಬಿಕ್ಕಟ್ಟು ಕೊನೆ ಗೊಳಿಸಬೇಕು ಎಂದು ಜೈಶಂಕರ್ ಹೇಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇಂಡೋನೇಷ್ಯಾ ರಾಜಧಾನಿ ಬಾಲಿಯಲ್ಲಿ ಜಿ-20 ರಾಷ್ಟ್ರಗಳ ವಿದೇಶಾಂಗ ಸಚಿವರ ಸಮ್ಮೇಳನದ ನಡುವೆಯೇ ಎರಡೂ ರಾಷ್ಟ್ರಗಳ ಸಚಿವರ ನಡುವೆ ನಡೆದ ಒಂದು ಗಂಟೆ ಅವಧಿಯ ಮಾತುಕತೆಯಲ್ಲಿ ಗಡಿ ತಂಟೆ ಅಂಶದ ಬಗ್ಗೆ ಪ್ರಧಾನವಾಗಿ ಚರ್ಚಿಸಲಾಗಿದೆ.
ಮುಂದಿನ ದಿನಗಳಲ್ಲಿ ಶೀಘ್ರವೇ ಭಾರತ ಮತ್ತು ಚೀನ ಮಿಲಿ ಟರಿ ಅಧಿಕಾರಿಗಳ ನಡುವೆ ಮತ್ತೂಮ್ಮೆ ಮಾತುಕತೆ ನಡೆಸಲಾಗುತ್ತದೆ. ಇದರ ಜತೆಗೆ ಚೀನಕ್ಕೆ ಭಾರತೀಯ ವಿದ್ಯಾರ್ಥಿ ಗಳು ತೆರಳಿ ಅಲ್ಲಿ ಶಿಕ್ಷಣ ಮುಂದುವರಿಸುವ ಬಗ್ಗೆಯೂ ಜೈಶಂಕರ್, ವಾಂಗ್ ಜತೆಗೆ ಚರ್ಚಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.