Thursday, March 13, 2025
Thursday, March 13, 2025

ಮನುಕುಲದ ಒಳಿತಿಗೆ ಮತ್ತು ಮಾನವೀಯತೆಗಾಗಿಯೋಗ-ಮೋದೀಜಿ

Date:

ಯೋಗ ಕೇವಲ ವ್ಯಕ್ತಿಗಾಗಿ ಅಲ್ಲ ಅದು ಮನು ಕುಲದ ಒಳಿತಿಗಾಗಿ, ಇಡೀ ವಿಶ್ವಕ್ಕೆ ಶಾಂತಿ ನೀಡುವ ಶಕ್ತಿ ನಮ್ಮ ಯೋಗಕ್ಕಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೈಸೂರು ಅರಮನೆ ಮೈದಾನದಲ್ಲಿ ಆಯೋಜಿಸಿರುವ ವಿಶೇಷ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.

ಈ ಇಡೀ ವಿಶ್ವವು ನಮ್ಮ ದೇಹ ಮತ್ತು ಆತ್ಮದಿಂದ ಆರಂಭವಾಗುತ್ತದೆ. ವಿಶ್ವವು ನಮ್ಮಿಂದ ಪ್ರಾರಂಭವಾಗುತ್ತದೆ ಮತ್ತು ಯೋಗವು ನಮ್ಮೊಳಗಿನ ಎಲ್ಲವನ್ನೂ ಜಾಗೃತಗೊಳಿಸುತ್ತದೆ ಮತ್ತು ಅರಿವಿನ ಪ್ರಜ್ಞೆಯನ್ನು ನಿರ್ಮಿಸುತ್ತದೆ ಎಂದರು.

ಕೆಲವು ವರ್ಷಗಳ ಹಿಂದೆ ಯೋಗ ಮನೆಯೊಳಗೆ, ಆಧ್ಯಾತ್ಮಿಕ ಕೇಂದ್ರಗಳಲ್ಲಿ ನಡೆಯುತ್ತಿತ್ತು. ಈಗ ದೇಶದ ಮೂಲೆ ಮೂಲೆಗಳಲ್ಲಿ ಯೋಗ ನಡೆಯುತ್ತಿದೆ. ಇದು ವ್ಯಕ್ತಿಗಾಗಿ ಯೋಗವಲ್ಲ. ಮನು ಕುಲದ ಒಳಿತಿಗಾಗಿ ಯೋಗ. ಈ ಕಾರಣಕ್ಕೆ ಈ ಬಾರಿ ಮಾನವೀಯತೆಗಾಗಿ ಯೋಗ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಈ ದಿನ ಆಚರಿಸುತ್ತಿರುವ 8ನೇ ಅಂತಾರಾಷ್ಟ್ರೀಯ ಯೋಗ ದಿನದಂದು ನಾನು ಎಲ್ಲರಿಗೂ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇಂದು ಪ್ರಪಂಚದ ಎಲ್ಲಾ ಭಾಗಗಳಲ್ಲಿ ಯೋಗವನ್ನು ಅಭ್ಯಾಸ ಮಾಡಲಾಗುತ್ತಿದೆ. ಯೋಗವು ನಮಗೆ ಶಾಂತಿಯನ್ನು ತರುತ್ತದೆ. ಕೇವಲ ನಮಗೆ ಮಾತ್ರವಲ್ಲ ಯೋವು ನಮ್ಮ ರಾಷ್ಟ್ರ ಸೇರಿದಂತೆ ಇಡೀ ಜಗತ್ತಿಗೆ ಶಾಂತಿಯನ್ನು ತರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಸೂರ್ಯೋದಯ ಸಮಯಕ್ಕೆ ಇಡೀ ವಿಶ್ವದಲ್ಲಿ ಯೋಗ ಮಾಡಲಾಗುತ್ತಿದೆ. ಇಂದು ಯೂನಿವರ್ಸಲ್ ಯೋಗ ಚೈನ್ ಸೃಷ್ಟಿಯಾಗಲಿದೆ. ಒಂದೆರಡು ನಿಮಿಷದ ಧಾನ್ಯ ನಮ್ಮ ಮನಸ್ಸಿಗೆ ಶಕ್ತಿ ತುಂಬುತ್ತದೆ. ನಾವು ಯೋಗವನ್ನು ಬದುಕಿನ ಬಹು ದೊಡ್ಡ ಭಾಗವಾಗಿ ಸ್ವೀಕರಿಸಬೇಕು. ಯೋಗದ ಬಗ್ಗೆ ತಿಳಿದುಕೊಂಡು ಯೋಗದ ಜೊತೆಗೆ ಬದುಕುವುದ ಕಲಿಯಬೇಕು ಎಂದರು.

ಇಡೀ ವಿಶ್ವಕ್ಕೆ ಶಾಂತಿ ನೀಡುವ ಶಕ್ತಿ ಯೋಗಕ್ಕೆ ಇದೆ. ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಮಾನಸಿಕ ಶಾಂತಿ, ಸದೃಢತೆಗೆ ಪ್ರತಿಯೊಬ್ಬರು ಯೋಗ ಮಾಡಬೇಕು. ಯೋಗಕ್ಕೆ ಇರುವ ಶಕ್ತಿಯನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

2014ರ ಸೆಪ್ಟೆಂಬರ್ 27ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನದ ಕಲ್ಪನೆಯನ್ನು ಮೊದಲ ಬಾರಿಗೆ ಮುಂದಿಟ್ಟರು. ಭಾರತವು ಅಂಗೀಕರಿಸಿದ ಕರಡು ನಿರ್ಣಯವನ್ನು 177 ರಾಷ್ಟ್ರಗಳು ಬೆಂಬಲಿಸಿದವು. ಯೋಗದ ಸಾರ್ವತ್ರಿಕ ಮನ್ನಣೆ ಮತ್ತು ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆ, ವಿಶ್ವಸಂಸ್ಥೆಯು ಜೂನ್ 21 ಅನ್ನು 2014ರ ಡಿಸೆಂಬರ್ 11 ರಂದು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

State Film Awards 2020 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಘೋಷಣೆ

State Film Awards 2020ನೇ ಸಾಲಿನ ಆಯ್ಕೆ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ...

Klive Special ಹೆತ್ತವಳಿಗೊಂದು ಕವನ-ನಮನ

Klive Special ದೇವರ ಸ್ವರೂಪ ಗರ್ಭದಲ್ಲಿ ಹೊತ್ತುನವಮಾಸಕ್ಕೆ ಹೆತ್ತುಮೌಲ್ಯಗಳನ್ನೇ ಬಿತ್ತುಸಲಹಿದೆ ನೀಡಿ ಕೈತುತ್ತು ಅಮ್ಮ...

Guarantee Scheme ಸತ್ಯ & ಶುದ್ಧ ಮಾರ್ಗದಿಂದ ರಾಷ್ಟ್ರ ಕಟ್ಟಲು ಸಾಧ್ಯ- ಸಿ.ಎಸ್.ಚಂದ್ರಭೂಪಾಲ್

Guarantee Scheme ಅಂತರಂಗ ಮತ್ತು ಬಹಿರಂಗ ಶುದ್ದಿಯಿಂದ ಹಾಗೂ ಸತ್ಯದ ಮಾರ್ಗದಲ್ಲಿ...