ಮಾನ್ಯವಾದ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಿದರೆ ವಿಮಾನಯಾನ ಸಂಸ್ಥೆಗಳು 10,000 ರೂ.ಪರಿಹಾರ ನೀಡಬೇಕು ಎಂಬ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ.
ಜೂನ್ 14 ರಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮಾನ್ಯ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಿದರೆ ಪ್ರಯಾಣಿಕರಿಗೆ 10,000 ರೂಪಾಯಿಗಳವರೆಗೆ ಪರಿಹಾರವನ್ನು ಪಾವತಿಸಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಹೊಸ ಮಾರ್ಗಸೂಚಿಗಳ ಅನ್ವಯ ಭಾರತದ ವಾಯುಯಾನ ನಿಯಂತ್ರಕವು ಮಾನ್ಯವಾದ ಟಿಕೆಟ್ ಹೊಂದಿರುವ ಹಾಗೂ ಸಮಯಕ್ಕೆ ಹಾಜರಾದ ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಿದ ಸಂದರ್ಭದಲ್ಲಿ 10,000 ರೂಪಾಯಿಗಳ ಪರಿಹಾರವನ್ನು ಪ್ರಯಾಣಿಕರಿಗೆ ಪಾವತಿಸಬೇಕು ಎಂದು ಮಾಹಿತಿ ತಿಳಿಸಿದೆ.
ಮುಂದಿನ 24 ಗಂಟೆಯೊಳಗೆ ಪ್ರಯಾಣಿಕರು ಹೇಳಿದ ಸಮಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದರೆ ಏರ್‌ಲೈನ್ ಯಾವುದೇ ದಂಡ ಪಾವತಿಸಬೇಕಿಲ್ಲ. ಆದಾಗ್ಯೂ ಯಾವುದೇ ಸೌಲಭ್ಯ ಮಾಡಿಕೊಡದೇ ಇದ್ದು, ಪ್ರಯಾಣಿಕರಿಗೆ ಅಡಚಣೆ ಉಂಟಾದರೆ ದಂಡ ನೀಡಬೇಕು ಎಂದು ಆದೇಶಿಸಿದೆ.