ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಬಿಗಡಾಯಿಸುತ್ತಾ ಹೋದಂತೆಲ್ಲಾ ಸರ್ಕಾರ ಒಂದೊಂದೇ ರೀತಿಯಲ್ಲಿ ಅಲ್ಲಿನ ಜನರನ್ನು ಕೆಣಕುವ ಕ್ರಮ ತೆಗೆದುಕೊಳ್ಳುವೆ. ಕಳೆದ ಸ್ವಲ್ಪ ದಿನಗಳ ಹಿಂದೆಯಷ್ಟೇ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿ ತೆಗೆದು ಹಾಕಿ ಜನರ ಕೆಂಗಣ್ಣಿಗೆ ಇದು ಕಾರಣವಾಗಿತ್ತು.
ಅಲ್ಲದೆ, ಗ್ಯಾಸ್ ಹಾಗೂ ವಿದ್ಯುತ್ ಬೆಲೆಗಳನ್ನ ಶೇ.45 ರಷ್ಟು ಏರಿಕೆ ಮಾಡಿತ್ತು. ಈಗ ಪಾಕಿಸ್ತಾನದ ಜನರ ಹೊಟ್ಟೆಯ ಮೇಲೆ ಕಣ್ಣಾಕಿದ್ದು ಟೀ. ಈಗ ಕುಡಿಯೋದನ್ನ ಕಡಿಮೆ ಮಾಡಿ ಎಂದು ತಿಳಿಸಿದೆ.
ಪಾಕ್‌ನ ಯೋಜನಾ ಸಚಿವ ಅಸಾನ್ ಇಕ್ಬಾಲ್, ಜನ ದಿನಕ್ಕೆ ಒಂದರಿಂದ 2 ಕಪ್ ಚಹಾ ಕುಡಿಯೋದನ್ನ ಕಡಿಮೆ ಮಾಡಬೇಕು. ಇದರಿಂದ ದೇಶದ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ, ವಿಶ್ವದ ಅತಿದೊಡ್ಡ ಚಹಾ ಆಮದುದಾರ ದೇಶವಾಗಿದೆ. ಇರುವ 22 ಕೋಟಿ ಜನರು ಕೂಡ ಚಹಾ ಪ್ರಿಯರಾಗಿದ್ದಾರೆ. ಆದ್ದರಿಂದ, ವರ್ಷಕ್ಕೆ ಪಾಕಿಸ್ತಾನ 600 ಮಿಲಿಯನ್ ಡಾಲರ್ ಅಂದರೆ ಸುಮಾರು 4,700 ಕೋಟಿ ರೂಪಾಯಿ ಮೌಲ್ಯದ ಚಹಾವನ್ನು ಆಫ್ರಿಕಾದ ಕೀನ್ಯಾ, ಉಗಾಂಡ, ರವಾಂಡ, ಚೀನಾ, ಬಾಂಗ್ಲಾ ದೇಶಗಳಿಂದ ಆಮದು ಮಾಡಿಕೊಳ್ಳುತ್ತೆ. ಜೊತೆಗೆ ಪಾಕಿಸ್ತಾನದ ಹಣದ ಮೌಲ್ಯ ಆತಂಕಕಾರಿ ರೀತಿಯಲ್ಲಿ ಕುಸಿತ ಕಾಣುತ್ತಿದೆ. ಅಮೆರಿಕದ ಒಂದು ಡಾಲರ್‌ಗೆ ಈಗ ಪಾಕಿಸ್ತಾನ 206 ರೂಪಾಯಿ ಕೊಡಬೇಕು. ಆದ್ದರಿಂದ, ಪಾಕಿಸ್ತಾನ ಸರ್ಕಾರ ಏನಾದ್ರೂ ಮಾಡಿ ಹದಗೆಟ್ಟಿರೋ ಆರ್ಥಿಕತೆಯನ್ನು ಮತ್ತೆ ದಾರಿಗೆ ತರಬೇಕು ಎಂದು ಹರಸಾಹಸ ಪಡುತ್ತಿದೆ.