ರಾಜ್ಯಸಭೆ ಚುನಾವಣೆಯಲ್ಲಿ ಮತವನ್ನು ತೋರಿಸಿ ಹಾಕಿದ್ದಾರೆ. ಈ ಮೂಲಕ ಗೌಪ್ಯ ಮತದಾನದ ನಿಯಮವನ್ನು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಉಲ್ಲಂಘಿಸಿದ್ದಾರೆ ಎಂಬುದಾಗಿ ಕಾಂಗ್ರೆಸ್ ಮತ್ತು ಇಂದು ಕಾಂಗ್ರೆಸ್ ಪಕ್ಷದ ಚುನಾವಣಾ ಏಜೆಂಟ್ ಪ್ರಕಾಶ್ ರಾಥೋಡ್ ಅವರು, ಚುನಾವಣಾಧಿಕಾರಿಗೆ ಮತ್ತೊಂದು ಮೇಲ್ಮನವಿ ಪತ್ರವನ್ನು ಸಲ್ಲಿಸಿದೆ.
ಈ ಪತ್ರದಲ್ಲಿ ಹೆಚ್ .ಡಿ. ರೇವಣ್ಣ ಅವರು ಸುಪ್ರೀಂ ಕೋರ್ಟ್ ನ ಮತದಾನದ ಗೌಪ್ಯ ನೀತಿಯನ್ನು ಉಲ್ಲಂಘಿಸಿದ್ದಾರೆ. ತಮ್ಮ ಮತವನ್ನು ಹಾಕುವ ಸಂದರ್ಭದಲ್ಲಿ ಬೇರೆಯವರಿಗೆ ತೋರಿಸಿ ಹಾಕಿದ್ದಾರೆ. ಅವರ ನಡೆಯನ್ನು ಕ್ಲೀನ್ ಚೀಟ್ ನೀಡಿದ್ದು ಸರಿಯಲ್ಲ. ಮತ್ತೊಮ್ಮೆ ಪರಿಶೀಲಿಸಿ, ಅವರ ಮತವನ್ನು ಅಸಿಂಧುಗೊಳಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ, ಚುನಾವಣಾಧಿಕಾರಿ ನೀಡಿರುವಂತ ಆದೇಶವನ್ನು ರದ್ದುಗೊಳಿಸುವಂತೆ ಕೋರಿದ್ದರು.
ಅಲ್ಲದೇ, ಹೆಚ್.ಡಿ. ರೇವಣ್ಣ ಅವರ ಮತವನ್ನು ಅಸಿಂಧುಗೊಳಿಸಲು ಮನವಿ ಮಾಡಲಾಗಿತ್ತು. ಆದರೆ, ಅವರು ಗೌಪ್ಯತೆ ನಿಯಮ ಮೀರಿಲ್ಲ ಎಂಬುದಾಗಿ ಚುನಾವಣಾಧಿಕಾರಿ ಕ್ಲೀನ್ ಚೀಟ್ ನೀಡಿದ್ದರು. ಈ ಕ್ರಮ ಪ್ರಶ್ನಿಸಿ, ಈಗ ಮತ್ತೆ ಕಾಂಗ್ರೆಸ್ ಮೇಲ್ಮನವಿ ಸಲ್ಲಿಸಿತ್ತು. ಇದೀಗ, ಕೇಂದ್ರ ಚುನಾವಣಾ ಆಯೋಗವೂ ಮತವನ್ನು ಸಿಂಧುಗೊಳಿಸಿ, ಆದೇಶಿಸಿದೆ.
ಇಂದು ನಡೆಯುತ್ತಿರುವಂತಹ ರಾಜ್ಯಸಭೆ ಚುನಾವಣೆಯ ಮತದಾನದ ವೇಳೆಯಲ್ಲಿ ಜೆಡಿಎಸ್ ಏಜೆಂಟ್ ಗೆ ತಮ್ಮ ಮತ ಯಾರಿಗೆ ಚಲಾಯಿಸುತ್ತೇನೆ ಎಂಬುದನ್ನು ಬ್ಯಾಲೆಟ್ ಪೇಪರ್ ತೋರಿಸಿ ಹಾಕಿದ್ದರು. ಇದನ್ನು ಡಿ.ಕೆ. ಶಿವಕುಮಾರ್ ಕೂಡ ನೋಡಿದ್ದರು ಎನ್ನಲಾಗಿದೆ.
ಆದ್ದರಿಂದ, ಕಾಂಗ್ರೆಸ್ ಬಿಜೆಪಿಯ ಪಕ್ಷದಿಂದ ಚುನಾವಣಾಧಿಕಾರಿ ವಿಶಾಲಾಕ್ಷಿಗೆ ಗೌಪ್ಯ ಮತದಾನದ ನಿಯಮವನ್ನು ಹೆಚ್ .ಡಿ.ರೇವಣ್ಣ ಉಲ್ಲಂಘಿಸಿದ್ದಾರೆ. ಅವರ ಮತವನ್ನು ಅಸಿಂಧುಗೊಳಿಸುವಂತೆ ದೂರು ನೀಡಿದ್ದರು.ಬಿಜೆಪಿಯಿಂದ ಚುನವಾಣಾಧಿಕಾರಿಗೆ ದೂರು ನೀಡಲಾಗಿತ್ತು.