Wednesday, December 17, 2025
Wednesday, December 17, 2025

ಕನ್ನಡ ಮಾಧ್ಯಮದಲ್ಲೂ ಐಎಎಸ್ ಪರೀಕ್ಷೆ ಬರೆಯಬಹುದು- ಅಪೂರ್ವ ಬಾಸೂರು

Date:

ಕೇಂದ್ರದ ನಾಗರಿಕ ಪರೀಕ್ಷೆ (ಐಎಎಸ್) ಬರೆಯಬೇಕು ಪಾಸಾಗಬೇಕು ಎಂಬುವುದು ಬಹಳಷ್ಟು ಜನರ ಕನಸಾಗಿರುತ್ತದೆ.

ಆದರೆ, ಐಎಎಸ್​ ಬರೆಯಲು ಇಂಗ್ಲಿಷ್​ನಲ್ಲಿ ಹೆಚ್ಚಿನ ಪ್ರಾವೀಣ್ಯತೆ ಬೇಕಾಗುತ್ತದೆ ಎಂಬ ತಪ್ಪು ಕಲ್ಪನೆ ಬಹಳಷ್ಟು ಜನರಲ್ಲಿದೆ. ಐಎಎಸ್​ನ ಮುಖ್ಯ ಪರೀಕ್ಷೆಯಲ್ಲಿ ಕನ್ನಡಕ್ಕೂ ಅವಕಾಶವಿದ್ದು, ಕನ್ನಡವನ್ನು ಆಯ್ಕೆ ಮಾಡಿಕೊಂಡು ಕನ್ನಡದಲ್ಲಿಯೇ ಪರೀಕ್ಷೆ ಬರೆದರೂ ಪಾಸಾಗಬಹುದು ಎಂದು 2021-22ನೇ ಸಾಲಿನ ಕೇಂದ್ರದ ನಾಗರಿಕ ಪರೀಕ್ಷೆಯಲ್ಲಿ 191ನೇ ರ್‍ಯಾಂಕ್ ಗಳಿಸಿರುವ ಅಪೂರ್ವ ಬಾಸೂರು ಅವರು ತಿಳಿಸಿದ್ದಾರೆ.

ಈ ಮಾತನಾಡಿದ ಅವರು, ಕನ್ನಡ ಮಾಧ್ಯಮದಲ್ಲಿ ಓದಿದ್ದೇವೆ ಎಂಬ ಕೀಳಿರಿಮೆ ಬೇಡ. ಕನ್ನಡ ಮಾಧ್ಯಮದ ಮಕ್ಕಳೂ ಉತ್ತಮ ಸಾಧನೆ ಮಾಡಲು ನಾಗರಿಕ ಸೇವಾ ಪರೀಕ್ಷೆಯಲ್ಲಿ ವಿಫುಲ ಅವಕಾಶಗಳಿವೆ.

ಮುಖ್ಯವಾಗಿ ಸತತ ಪರಿಶ್ರಮ, ಆಳವಾದ ಅಧ್ಯಯನ, ವಿಷಯ ಮನವರಿಕೆ ಸಾಮರ್ಥ್ಯ, ಕ್ರಿಯಾಶೀಲತೆ, ವಿಷಯಗಳನ್ನು ಅರಿಯುವ ಕುತೂಹಲ ಇತ್ಯಾದಿ ಅಂಶಗಳು ನಮ್ಮ ಅಧ್ಯಯನ ಮತ್ತು ಪರೀಕ್ಷಾ ಸಿದ್ಧತೆಗೆ ಪೂರಕವಾಗಿರುತ್ತವೆ. ನನ್ನ ಸಾಧನೆ ಹಿಂದೆ ನನ್ನ ಕುಟುಂಬ ಸದಸ್ಯರ ತ್ಯಾಗವಿದೆ. ಮುಖ್ಯವಾಗಿ ನನ್ನ ತಾಯಿ ನನ್ನೊಂದಿಗೆ ಇದ್ದು, ದೆಹಲಿಯಲ್ಲಿ ಕಳೆದ ಕ್ಷಣಗಳು, ಮಾಡಿದ ಕೆಲಸ, ನಿತ್ಯ ನನಗೆ ನೀಡುತ್ತಿದ್ದ ಬೆಂಬಲ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಯಾವ ಪದವಿ ಯುಪಿಎಸ್​​​ಸಿ ಪರೀಕ್ಷೆಗೆ ಪೂರಕವಾಗುತ್ತದೆ ಎಂಬ ಕುತೂಹಲ ಬಹುತೇಕರಲ್ಲಿರುತ್ತದೆ. ಯಾವುದೇ ಪದವಿ ಮಾಡಿದ್ದರೂ ಸರಿ. ನೀವು ಆಯ್ಕೆ ಮಾಡಿ ಪದವಿ ಮಾಡಿದ ವಿಷಯದ ಕೇವಲ ಇಂತಿಷ್ಟು ಭಾಗ ಮಾತ್ರ ಯುಪಿಎಸ್​​​ಸಿ ಪರೀಕ್ಷೆಯಲ್ಲಿ ವಿಷಯ ಇರುತ್ತದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...