Saturday, December 6, 2025
Saturday, December 6, 2025

ಗಮನಿಸಿ! ಬ್ಯಾಂಕ್ ಕಾರ್ಡ್ಗಳ ನಿಯಮಗಳಲ್ಲಿ ಬದಲಾವಣೆ ಬರಲಿದೆ

Date:

ಕಾರ್ಡ್‌ಗಳ ಬಳಕೆಯಲ್ಲಿ ಪಾರದರ್ಶಕತೆ ತರಲು ಮತ್ತು ಕಾರ್ಡ್‌ದಾರರ ಹಕ್ಕುಗಳನ್ನು ರಕ್ಷಿಸಲು ಆರ್‌ಬಿಐ ನಿರಂತರವಾಗಿ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇದೆ. ಇತ್ತೀಚೆಗೆ ಕೆಲವು ಬದಲಾವಣೆಗಳನ್ನು ತಂದಿದ್ದು, ಜೂನ್​ 1ರಿಂದ ಅವುಗಳು ಜಾರಿಗೆ ಬಂದಿವೆ.

RBI ತಂದಿರುವ ಹೊಸ ನಿಯಮಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವ ಬ್ಯಾಂಕ್‌ಗಳು ಮತ್ತು NBFCಗಳ ಜೊತೆಗೆ ಕಾರ್ಡುದಾರರಿಗೂ ಕೆಲವೊಂದು ಹೊಣೆಗಾರಿಕೆಗಳನ್ನು ಜಾರಿಗೊಳಿಸಿದೆ.

ಕಾರ್ಡ್ ನಿರ್ವಹಣೆಯಲ್ಲಿನ ದೋಷಗಳಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವ ಬ್ಯಾಂಕ್‌ಗಳು ಹೊಣೆ ಆಗಿರುತ್ತವೆ ಎಂದು ತಿಳಿಸಿದೆ.

ಹೆಚ್ಚಿನ ಜನರು ತಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪೂರ್ಣವಾಗಿ ಪಾವತಿಸುವ ಬದಲು, ಸಾಮಾನ್ಯವಾಗಿ ಕಾರ್ಡ್​ ಬ್ಯಾಲೆನ್ಸ್​ನ ಶೇ. ಐದರವರೆಗೆ ಇರುವ ಕನಿಷ್ಠ ಬಾಕಿಯನ್ನಷ್ಟೇ ಪಾವತಿಸುತ್ತಾರೆ. ಈ ರೀತಿ ಕನಿಷ್ಠ ಮೊತ್ತವನ್ನಷ್ಟೇ ಪಾವತಿಸುವುದರಿಂದ ಹೆಚ್ಚಿನ ಬಡ್ಡಿಯ ಹೊರೆಯನ್ನು ಹೊರಬೇಕಾಗುತ್ತದೆ. ಹಾಗಾಗಿ ಈ ಬಗ್ಗೆ ಕಾರ್ಡ್​ ವಿತರಕರು ಗ್ರಾಹಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಆರ್​ಬಿಐ ಸೂಚಿಸಿದೆ.

ಕಾರ್ಡ್​ ಪ್ರಕಾರಗಳನ್ನು ಬದಲಾಯಿಸುವ, ಖರ್ಚು ಮಾಡಲು ಅನುಮತಿಸಲಾದ ಮೊತ್ತವನ್ನು ಹೆಚ್ಚಿಸುವ ಮತ್ತು ಇತ್ಯಾದಿ ಮೂಲಕ ಕ್ರೆಡಿಟ್ ಸ್ಕೋರ್, ಆದಾಯ, ಸಕಾಲಿಕ ಪಾವತಿಗಳು ಇತ್ಯಾದಿಗಳ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸುವುದಾಗಿ ಬ್ಯಾಂಕ್‌ಗಳು ಹೇಳುತ್ತವೆ. ಆದರೆ ಇಲ್ಲಿಯವರೆಗೆ ಈ ನಿರ್ಧಾರವನ್ನು ಬ್ಯಾಂಕ್‌ಗಳು ತಾವಾಗಿಯೇ ತೆಗೆದುಕೊಂಡು ಕಾರ್ಡ್‌ದಾರರಿಗೆ ನಂತರ ಕಾರ್ಡುದಾರರಿಗೆ ಮಾಹಿತಿ ನೀಡುತ್ತಿದ್ದವು. ಕೆಲವೊಮ್ಮೆ ಬ್ಯಾಂಕ್​ಗಳು ಮನಬಂದಂತೆ ಕಾರ್ಡ್​ಗಳನ್ನೂ ಕಳುಹಿಸುತ್ತಿದ್ದ ಉದಾಹರಣೆಗಳಿವೆ.
ಆದರೆ ಇನ್ನು ಮುಂದೆ ಇಂತಹ ಕಾರ್ಡ್‌ಗಳನ್ನು ನೀಡಲು ಬ್ಯಾಂಕ್​ಗಳು ಕಾರ್ಡುದಾರರ ಅನುಮತಿ ಪಡೆಯಬೇಕು. ಕಾರ್ಡುದಾರರಿಗೆ ತಿಳಿಯದೆ ಮಿತಿಯನ್ನು ಹೆಚ್ಚಿಸಿ ಅದರ ಮೇಲೆ ಶುಲ್ಕ ವಿಧಿಸುವ ಅವಕಾಶ ಬ್ಯಾಂಕ್​ಗಳಿಗಿರುವುದಿಲ್ಲ. ಒಂದು ವೇಳೆ ಮೊತ್ತ ಮರುಪಾವತಿ ಮಾಡುವುದರ ಜೊತೆಗೆ ಶುಲ್ಕ ವಿಧಿಸಿದರೆ, ಬ್ಯಾಂಕ್​ಗಳು ಕಾರ್ಡ್‌ದಾರರಿಗೆ ಶುಲ್ಕದ ದುಪ್ಪಟ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇದು ಕಾರ್ಡ್​ ಲೋನ್​ಗಳಿಗೂ ಅನ್ವಯಿಸುತ್ತದೆ.

ಹೊಸ ನಿಯಮಗಳ ಪ್ರಕಾರ, ಒಂದೇ ಪುಟದಲ್ಲಿ ಕ್ರೆಡಿಟ್ ಕಾರ್ಡ್‌ನ ಪ್ರಮುಖ ವಿವರಗಳನ್ನು ಒದಗಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ. ವಿವಿಧ ಸಂದರ್ಭಗಳಲ್ಲಿ ಅನ್ವಯವಾಗುವ ಶುಲ್ಕಗಳು, ಬ್ಯಾಲೆನ್ಸ್ ವರ್ಗಾವಣೆ, ವಿಳಂಬ ಪಾವತಿ ಶುಲ್ಕಗಳು ಮತ್ತು ಬಡ್ಡಿದರಗಳನ್ನು ಅದು ಒಳಗೊಂಡಿರಬೇಕು. ಒಂದು ವೇಳೆ ಹೊಸ ಶುಲ್ಕ ವಿಧಿಸಿದರೆ, ಅದರ ಬಗ್ಗೆ ಒಂದು ತಿಂಗಳ ಮುಂಚಿತವಾಗಿ ಕಾರ್ಡ್‌ದಾರರಿಗೆ ಮಾಹಿತಿ ಕೊಟ್ಟಿರಬೇಕು. ಒಂದು ವೇಳೆ ಹೊಸ ಶುಲ್ಕಗಳು ಕಾರ್ಡುದಾರರಿಗೆ ಹೊರೆಯಾಗುತ್ತದೆ ಎಂದು ಅನಿಸಿದರೆ ತಮ್ಮ ಕಾರ್ಡುಗಳನ್ನು ರದ್ದು ಮಾಡುವ ಹಕ್ಕು ಗ್ರಾಹಕರಿಗಿರುತ್ತದೆ.

ಕ್ರೆಡಿಟ್ ಕಾರ್ಡ್ ಎಲ್ಲಿಯಾದರೂ ಬಿದ್ದರೆ ಮತ್ತು ಅದರ ಮೂಲಕ ಅನಧಿಕೃತ ವಹಿವಾಟು ನಡೆದರೆ, ನಷ್ಟವನ್ನು ಭರಿಸಲು ವಿಮಾ ಪಾಲಿಸಿ ತೆಗೆದುಕೊಳ್ಳಬಹುದು. ಕಾರ್ಡ್ ಕಂಪನಿಗಳು ಗ್ರಾಹಕರ ಒಪ್ಪಿಗೆಯೊಂದಿಗೆ ಇವುಗಳನ್ನು ಒದಗಿಸಬಹುದು. ಕಾರ್ಡ್ ಮೋಸದ ವಹಿವಾಟಿಗೆ ಕಾರ್ಡ್ ನೀಡುವ ಕಂಪನಿಗಳು ಜವಾಬ್ದಾರರಾಗಿರುವುದಿಲ್ಲ. ಇದನ್ನು ವಿಮಾ ಕಂಪನಿಗಳು ನೋಡಿಕೊಳ್ಳುತ್ತವೆ. ಕಾರ್ಡ್ ಕಳೆದುಹೋದ ಮೂರು ದಿನಗಳಲ್ಲಿ ಕಾರ್ಡುದಾರರು ಬ್ಯಾಂಕ್‌ಗಳ ಗಮನಕ್ಕೆ ತರಬೇಕು. ಆಗ ಮಾತ್ರ ಆದ ಹಾನಿಗೆ ಪರಿಹಾರ ಪಡೆಯುವ ಹಕ್ಕು ಇರುತ್ತದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...