ವಿಧಾನ ಪರಿಷತ್ ಚುನಾವಣೆ, ರಾಜ್ಯಸಭಾ ಚುನಾವಣೆ ಹೀಗೆ ಎಲ್ಲಾ ಸಂದರ್ಭದಲ್ಲೂ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಎಂಬ ಮಾತು ಕೇಳಿಬಂದಿತ್ತು.
ಅದರಲ್ಲೂ ಬಿ.ವೈ.ವಿಜಯೇಂದ್ರ ಗೆ ವಿಧಾನ ಪರಿಷತ್ ಸ್ಥಾನ ನೀಡದೇ ಇದ್ದಾಗಲೂ ಬಿಎಸ್ವೈ ಕಡೆಗಣನೆ ಆಗ್ತಿದೆ ಎಂದೇ ಅರ್ಥೈಸಲಾಗ್ತಿತ್ತು.
ಆದರೆ ಈಗ ಸಂದೇಹಗಳಿಗೆಲ್ಲ ಬಿಎಸ್ ವೈ ಉತ್ತರ ನೀಡಿದ್ದು, ನನಗೆ ವಯಸ್ಸಾಗಿದೆ ಎಂಬ ಚಿಂತೆ ಪಕ್ಷದ ಕಾರ್ಯಕರ್ತರಿಗೆ ,ಮುಖಂಡರಿಗೆ ಬೇಡ ನಾನಿನ್ನು 10 ವರ್ಷ ರಾಜ್ಯದಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಬಿಎಸ್ ವೈ ಗುಡುಗಿದ್ದಾರೆ.
ನನಗೆ 70 ವರ್ಷ ವಯಸ್ಸಾಯಿತು. 80 ವರ್ಷ ವಯಸ್ಸಾಯಿತು ಎಂದು ನೀವು ಯೋಚನೆ ಮಾಡಬೇಡಿ. ಇನ್ನು 10 ವರ್ಷಗಳ ಕಾಲ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡ್ತೇನೆ.ಮುಂದಿನ ದಿನಗಳಲ್ಲಿ ಮತ್ತೆ ಬಂದು ರಾಜಕೀಯ ಭಾಷಣ ಮಾಡುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.
ಆ ಮೂಲಕ ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಬೇಕೆಂದು ಹೈಕಮಾಂಡ್ ಗೆ ರಾಜಾಹುಲಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಬರುವ ವಿಧಾನಸಭಾ ಚುನಾವಣೆಗಾಗಿ ಈಗಿನಿಂದಲೇ ಕೆಲಸ ಮಾಡುವೆ ಎಂದಿರುವ ಬಿ.ಎಸ್.ಯಡಿಯೂರಪ್ಪ, 90 ವರ್ಷ ದಾಟುವ ವರೆಗೂ ಇದೆ ರೀತಿ ಚಟುವಟಿಕೆಯಿಂದ ಕೆಲಸ ಮಾಡ್ತೇನೆ. ನಿಮ್ಮ ಬೆಂಬಲ, ಆಶೀರ್ವಾದ ಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ. ಇನ್ನೂ ಯಡಿಯೂರಪ್ಪ ಈ ಮಾತಿಗೆ ಬಿಎಸ್ವೈ ಮಾತು ಕೇಳಿ ಕೇಕೇ ಸಿಳ್ಳೆ ಹೊಡೆದ ಕಾರ್ಯಕರ್ತರು ರಾಜಾಹುಲಿ ಎಂದು ಕಿರುಚಿ ಸಂಭ್ರಮಿಸಿದ್ದಾರೆ.