ಪಾಕಿಸ್ತಾನ, ಚೀನಾ ಸೇರಿದಂತೆ ಭಾರತದ ಶತ್ರುಗಳಿಗೆ ನಡುಕ ಶುರುವಾಗಿದೆ. ಕಾರಣ ಭಾರತ ಅಗ್ನಿ4 ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಿದೆ.
ಭಾರತ ಈಗಾಗಲೇ ಹಲವು ಕ್ಷಿಪಣಿಗಳ ಪರೀಕ್ಷೆಯನ್ನು ನಡೆಸಿದೆ. ಆದರೆ ಈ ಬಾರಿ ಪರೀಕ್ಷಿಸಿದ ಅಗ್ನಿ 4 ನ್ಯೂಕ್ಲಿಯರ್ ಸಾಮರ್ಥ್ಯದ ಮಿಸೈಲ್ ಆಗಿದೆ.
ಇಷ್ಟೇ ಅಲ್ಲ ಬರೋಬ್ಬರಿ 4,000 ಕಿಲೋಮೀಟರ್ ಗುರಿ ಸಾಮರ್ಥ್ಯ ಹೊಂದಿದೆ.
ಒಡಿಶಾದ ಎಪಿಜೆ ಅಬ್ಬುಲ್ ಕಲಾಂ ಕೇಂದ್ರದಿಂದ ಅಗ್ನಿ 4 ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ. ಇಂದು ಸಂಜೆ 7.30ಕ್ಕೆ ಈ ಕ್ಷಿಪಣಿ ಪರೀಕ್ಷೆ ಮಾಡಲಾಯಿತು.
ಭಾರತೀಯ ನೌಕಾಪಡೆ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯು ಜಂಟಿಯಾಗಿ ಒಡಿಶಾದ ಚಂಡೀಪುರ ತೀರದಿಂದ ನೌಕಾ ಹೆಲಿಕಾಪ್ಟರ್ ಮೂಲಕ ಪರೀಕ್ಷಾರ್ಥವಾಗಿ ಕ್ಷಿಪಣಿಯನ್ನು ಉಡಾವಣೆ ಮಾಡಿತ್ತು. ಕ್ಷಿಪಣಿ ನಿಗದಿತ ಗುರಿಯನ್ನು ಯಶಸ್ವಿಯಾಗಿ ತಲುಪಿದೆ ಎಂದು ನೌಕಾಪಡೆ ತಿಳಿಸಿದೆ.
ಡಿಫೆರನ್ಸ್ ರಿಚರ್ಸ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಜೇಶನ್ ಅಭಿವೃದ್ಧಿಪಡಿಸಿದ ಈ ಕ್ಷಿಪಣಿ ಅತ್ಯಂತ ಸಾಮರ್ಥ್ಯದ ಮಿಸೈಲ್ ಆಗಿದೆ.
ದೆಹಲಿಯಿಂದಲೇ ಕೂತು ಪಾಕಿಸ್ತಾನವನ್ನೇ ಸರ್ವನಾಶ ಮಾಡಲು ಸಾಧ್ಯವಿದೆ.
ಯುದ್ಧನೌಕೆ ಧ್ವಂಸ ಕ್ಷಿಪಣಿ ಪ್ರಯೋಗ ಯಶಸ್ವಿ
ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಹಡಗು ಧ್ವಂಸ (ಆಯಂಟಿ-ಶಿಪ್) ನೌಕಾ ಕ್ಷಿಪಣಿಯು ತನ್ನ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.