ಭಾರತದ ಧಾರ್ಮಿಕ ಸ್ವಾತಂತ್ರದ ಬಗ್ಗೆ ವರದಿ ಪ್ರಕಟಿಸಿ ಅಲ್ಪಾಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ಅಮೆರಿಕ ಭಾರತದ ಮೇಲೆ ಆರೋಪ ಮಾಡಿತ್ತು. ಈಗ ಇದಕ್ಕೆ ಭಾರತ ಪ್ರತಿ ಉತ್ತರವನ್ನು ನೀಡಿದೆ.
ಅದೇನು ಅಂದರೆ, ಅಂತರಾಷ್ಟ್ರೀಯ ಸಂಬಂಧಗಳಲ್ಲಿ ವೋಟ್ ಬ್ಯಾಂಕ್ ರಾಜಕಾರಣ ನಡೆಯುತ್ತಿದೆ ಎಂದು ಹೇಳುವ ಮುಖಾಂತರ ಅಮೆರಿಕಾಗೆ ತರಾಟೆಗೆ ತೆಗೆದುಕೊಂಡಿದೆ.
ಈ ಬಗ್ಗೆ ಹೇಳಿಕೆ ಪ್ರಕಟಿಸಿರೋ ವಿದೇಶಾಂಗ ಇಲಾಖೆ ವಕ್ತಾರ ಅರಿಂಧಮ್ ಬಗ್ಚಿ ಅಮೆರಿಕ ಮಾಡಿರೋ ವರದಿ ಸಂಪೂರ್ಣವಾಗಿ ಆಧಾರ ರಹಿತ. ದುರಾದೃಷ್ಟಾವಶಾತ್ ಅಂತರಾಷ್ಟ್ರೀಯ ಸಂಬಂಧಗಳಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದೆ. ಇಂತಹ ವರದಿಗಳನ್ನು ಅಮೆರಿಕ ದೂರ ಮಾಡಬೇಕು.
ಭಾರತ ಬಹುಸಂಸ್ಕೃತಿಗಳ ಸಮಾಜ. ಇಲ್ಲಿ ಎಲ್ಲಾ ಧರ್ಮಗಳ ಸ್ವಾತಂತ್ರ, ಮತ್ತು ಮಾನವ ಹಕ್ಕುಗಳನ್ನ ಗೌರವಿಸಲಾಗುತ್ತದೆ ಎಂದು ಉತ್ತರವನ್ನು ನೀಡಿದ್ದಾರೆ. ಟಾಂಗ್ ಕೊಟ್ಟಿದ್ದಾರೆ. ಇದೇ ಸಂದರ್ಭ ಅಮೆರಿಕದಲ್ಲಿ ಆಗುತ್ತಿರುವ ಜನಾಂಗೀಯ ದೌರ್ಜನ್ಯಗಳಿಗೆ, ಬಂದೂಕಿನಿಂದ ಆಗುತ್ತಿರುವ ದುರಂತಗಳಿಗೆ ನಾವು ತೀವ್ರ ಕಾಳಜಿ ವ್ಯಕ್ತಪಡಿಸುತ್ತೇವೆ ಎಂದು ಹೇಳುವ ಮುಖಾಂತರ ಭಾರತ ತನ್ನ ಪ್ರತಿಕ್ರಿಯಿಸಿದೆ.
