ಮಾನ್ಯತೆ ಪಡೆದ ಪದವಿ ಪೂರ್ವ ಕಾಲೇಜುಗಳಲ್ಲಿ 2022-23 ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರವೇಶಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಉಮೇಶಪ್ಪ ಅವರು ಸಲಹೆ ನೀಡಿದ್ದಾರೆ.
ಖಾಸಗಿ ಕಾಲೇಜುಗಳ ಮಾನ್ಯತೆ ಕುರಿತು ಅನುಮಾನಗಳಿದ್ದರೆ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಮಾಹಿತಿ ಪಡೆಯಬೇಕು. ಇಲಾಖೆಯ ಮಾರ್ಗಸೂಚಿಯಂತೆ ಕಾಲೇಜುಗಳು ಕಾರ್ಯನಿರ್ವಹಿಸುವುದು ಕಡ್ಡಾಯವಾಗಿದೆ. ಇತರ ಶೈಕ್ಷಣಿಕ ಸಂಸ್ಥೆಯೊಂದಿಗೆ, ಅಕಾಡೆಮಿಕ್ಸ್ ಶೈಕ್ಷಣಿಕ ಸಂಸ್ಥೆ ಹಾಗೂ ಅಕಾಡೆಮಿಕ್ಸ್ ಟ್ಯುಟೋರಿಯಲ್‍ಗಳ ಜತೆ ಹೊಂದಾಣಿಕೆ ಮಾಡಿಕೊಂಡಿರಬಾರದು. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರವೇ ಪ್ರವೇಶಕ್ಕೆ ದಾಖಲಿಸಬೇಕು. ದಾಖಲಿಸಿದ ನಂತರ ಪರೀಕ್ಷೆ ಸಮಯದಲ್ಲಿ ಕಾಲೇಜುಗಳ ಮಾನ್ಯತೆ ಕುರಿತು ಗೊಂದಲ ಮತ್ತು ಶುಲ್ಕ ಪಾವತಿ ಅಂಶವನ್ನು ಇಲಾಖೆಯ ಗಮನಕ್ಕೆ ತಂದರೆ ಯಾವುದೇ ಪ್ರಯೋಜನವಿಲ್ಲ. ಜೊತೆಗೆ ಅಂತಹ ಸಮಸ್ಯೆಗಳಿಗೆ ಇಲಾಖೆ ಜವಾಬ್ದಾರಿಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಕಾಲೇಜುಗಳಲ್ಲಿ ಮಕ್ಕಳ ದಾಖಲಾತಿಗೆ ಯಾವುದೇ ಗೊಂದಲ ಮತ್ತು ಸಮಸ್ಯೆ ಇರುವುದಿಲ್ಲ.
ಖಾಸಗಿ ಕಾಲೇಜುಗಳಿಗೆ ಮಕ್ಕಳನ್ನು ದಾಖಲಿಸುವಾಗ ಎಚ್ಚರವಹಿಸಬೇಕು. ಖಾಸಗಿ ಕಾಲೇಜುಗಳು ಇಲಾಖೆಯ ನಿಯಮದ ಪ್ರಕಾರ ಶುಲ್ಕವನ್ನು ನಿಗದಿ ಪಡಿಸಿವೆಯೇ ಎಂಬುದನ್ನು ವಿಚಾರಿಸಬೇಕು. ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಲು ಇಚ್ಚಿಸುವ ಭಾಗದ ಸಂಯೋಜನೆಯನ್ನು ಕಾಲೇಜಿನಲ್ಲಿ ಬೋಧಿಸಲು ಇಲಾಖೆಯ ಅನುಮತಿ ಪಡೆದಿರುವುದನ್ನು ದಾಖಲಾತಿ ಪಡೆಯುವ ಪೂರ್ವದಲ್ಲಿ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.