ಈ ವಿದ್ಯಾರ್ಥಿನಿಗೆ ಹೆತ್ತವರಿಲ್ಲ. ಆದರೆ ಸಾಧಿಸುವ ಛಲ ಬಿಟ್ಟಿಲ್ಲ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಮಟ್ಟದ ಅಂಕಗಳಿಸಿ ಸಾಧನೆ ಮಾಡಿದ್ದಾಳೆ.
ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಚಂಡರಕಿ ಗ್ರಾಮದ ನರಸಮ್ಮ ಹಾಗೂ ನರಸಿಂಹ ದಂಪತಿಗಳ ಪುತ್ರಿ ಎನ್.ಸೋನು ಬೆಂಗಳೂರುನಲ್ಲಿ ಎಸ್ ಎಸ್ ಎಲ್ ಸಿ ಉತ್ತಮ ಸಾಧನೆ ಮಾಡಿದ್ದಾಳೆ. ಸೋನು ತಾಯಿ ನರಸಮ್ಮ ನಿಧನರಾದ ನಂತರ ಸೋನು ತಮ್ಮ ತಂದೆ ನರಸಿಂಹ ಅವರ ಜೊತೆ ಬೆಂಗಳೂರಿಗೆ ವಲಸೆ ಹೋಗುತ್ತಾಳೆ. ತಂದೆ ಕೂಲಿ ಕೆಲಸ ಮಾಡಲು ಹೋದರೆ ಸೋನು ಬೆಂಗಳೂರು ಸಹಕಾರ ನಗರದಲ್ಲಿರುವ ಗುಂಡಾಂಜನೇಯ ದೇವಸ್ಥಾನದಲ್ಲಿ ಭಿಕ್ಷೆ ಬೇಡುತ್ತಿದ್ದಳು.
ಇದನ್ನು ಅರಿತ ಸ್ಪರ್ಶಾ ಟ್ರಸ್ಟ್ ಸಿಬ್ಬಂದಿ ರೂಪಾ ಮಹಾಜನ್ ಅವರು ಬಾಲಕಿಯನ್ನು ರಕ್ಷಣೆ ಮಾಡಿ ಕರೆದುಕೊಂಡು ಹೋದರು. 2013 ರಲ್ಲಿ ಬಾಲಕಿಯನ್ನು ರಕ್ಷಣೆ ಮಾಡಿ ಸ್ಪರ್ಶಾ ಟ್ರಸ್ಟ್ ಗೆ ಕರೆದುಕೊಂಡು ಹೋದರು.
ಸ್ಪರ್ಶಾ ಟ್ರಸ್ಟ್ ಅನಾಥಳಾಗಿದ್ದ ಸೋನು ಅವರಿಗೆ ಉತ್ತಮ ಶಿಕ್ಷಣ ನೀಡಿ ನೋವು ದೂರ ಮಾಡಿದ್ದು ಇವಳ ಸಾಧನೆಗೆ ಸಾಕ್ಷಿಯಾಗಿದೆ.
ಸೋನುಳನ್ನು ಕರೆದುಕೊಂಡು ಹೋಗಿ ಬೆಂಗಳೂರಿನ ಸಂಜೀವಿನಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 3 ನೇ ತರಗತಿಗೆ ಸೇರಿಸಿದ್ದು ,7 ನೇ ತರಗತಿಯವರೆಗೆ ಅಧ್ಯಯನ ಮಾಡಿಸಿದ್ದಾರೆ.
ನಂತರ ಸೋನು ನಲ್ಲಿ ಆಸಕ್ತಿ ವಹಿಸಿರುವದನ್ನು ಅರಿತು ಸೋನು ಅವರನ್ನು ಹೆಸರಘಟ್ಟದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರವೇಶ ಕೊಡಿಸಿದ್ದು, ಈ ಶಾಲೆಯಲ್ಲಿಯೇ 8 ರಿಂದ 10 ನೇ ತರಗತಿವರಗೆ ವ್ಯಾಸಂಗ ಮಾಡಿದಳು. ಈಗ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಒಟ್ಟು 625 ಕ್ಕೆ 602 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಸ್ಪರ್ಶಾ ಟ್ರಸ್ಟ್ ನ ಸಿಬ್ಬಂದಿಗಳಾದ ರೂಪಾ ಮಹಾಜನ್,ಹುಲಿಶ್ ಅವರು ವಿದ್ಯಾರ್ಥಿನಿ ಇಂಗ್ಲಿಷ್ ತರಬೇತಿ ಸೇರಿದಂತೆ ಮೊದಲಾದ ವಿಷಯ ಕುರಿತು ತರಬೇತಿ ನೀಡಿದ್ದಾರೆ .
ನಾನು ಬೆಂಗಳೂರಿನ ಗುಂಡಾಂಜನೇಯ ದೇವಸ್ಥಾನದಲ್ಲಿ ಭೀಕ್ಷೆ ಬೇಡುತ್ತಿದ್ದೆ ಅಂದು ಜೀವನ ನಡೆಸುವುದು ಕಷ್ಟವಾಗಿತ್ತು .ಈ ವೇಳೆ ಸ್ಪರ್ಶಾ ಟ್ರಸ್ಟ್ ಸಿಬ್ಬಂದಿ ವರ್ಗದವರು ನನ್ನನ್ನು ನೋಡಿ ಸ್ಪರ್ಶಾ ಟ್ರಸ್ಟ್ ಕಚೇರಿಗೆ ಕರೆದುಕೊಂಡು ಹೋಗಿ ನಂತರ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ತಂದೆ ,ತಾಯಿ ಯಾರು ಇಲ್ಲ.ನಾನು ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂಬ ಗುರಿ ಹೊಂದಿದ್ದೇನೆ ಎಂದು ಸೋನು ತಿಳಿಸಿದ್ದಾರೆ.
