Tuesday, August 25, 2026
Tuesday, August 25, 2026

ಟೊಮ್ಯಾಟೊ ದರ ಏರಿತು ಈರುಳ್ಳಿ ಕೊಂಚ ಕುಸಿಯಿತು

Date:

ಕಳೆದ ಅನೇಕ ದಿನಗಳಿಂದ ಟೊಮೆಟೊ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ಬೆಳೆಗಾರರ ಮುಖದಲ್ಲಿ ಸಂತಸ ನೋಡುವಂತಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಈರುಳ್ಳಿ ದರ ಭಾರಿ ಪ್ರಮಾಣದಲ್ಲಿ ಇಳಿಮುಖ ಕಂಡು ರೈತರಿಗೆ ಸಂಕಷ್ಟ ಎದುರಾಗಿದೆ.

ಟೊಮೇಟೊ ದರ ಅನೇಕ ಕಡೆ ಕೆಜಿಗೆ 100 ರೂಪಾಯಿ ಗಡಿದಾಟಿದೆ.

ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ದರ ಏರಿಕೆ ಕಂಡಿದೆ. ಕೋಲಾರ ಮಾರುಕಟ್ಟೆಯಲ್ಲಿ ಸಗಟು ದರ ಕ್ವಿಂಟಾಲ್ 6000 ರೂಪಾಯಿಗೆ ಜಿಗಿದಿದೆ. ಏಪ್ರಿಲ್ 23 ರಂದು 1 ಕ್ವಿಂಟಾಲ್ ಟೊಮೆಟೊ ಸಗಟು ದರ ಗರಿಷ್ಠ 3200 ರೂಪಾಯಿ ಇತ್ತು. ದಿನೇ ದಿನೇ ಟೊಮೆಟೊ ಬೆಲೆ ಏರಿಕೆಯಾಗುತ್ತಿರುವುದದಿಂದ ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ರಫ್ತು ನಿಷೇಧ ಸೇರಿದಂತೆ ಹಲವು ಕಾರಣಗಳಿಂದಾಗಿ ಈರುಳ್ಳಿ ದರ ಕುಸಿತ ಕಂಡಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಈರುಳ್ಳಿ ಸಗಟು ದರ ಕೆಜಿಗೆ ಕೇವಲ 3 ರೂಪಾಯಿಗೆ ಕುಸಿದಿದೆ. 50 ಕೆಜಿಗೆ 500 ರೂ. ದರ ಇದೆ. ಕೆಲವೆಡೆ ಈರುಳ್ಳಿ ದರ ಇದಕ್ಕಿಂತಲೂ ಕಡಿಮೆಯಾಗಿದೆ ಎನ್ನಲಾಗಿದೆ.

ಬೆಳೆದ ಖರ್ಚು ಮಾಡಿದ ಬೆಲೆ ಕೂಡ ರೈತರಿಗೆ ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಜಮೀನಿನಿಂದ ಮಾರುಕಟ್ಟೆಗೆ ಈರುಳ್ಳಿ ತೆಗೆದುಕೊಂಡು ಹೋದರೆ ಲಾರಿ ಬಾಡಿಗೆ ಕೂಡ ಸಿಗದ ಕಾರಣಕ್ಕೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರು ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಸಗಟು ದರ 50 ಕೆಜಿ ಚೀಲಕ್ಕೆ 500ರಿಂದ 600 ರೂಪಾಯಿ, 2ನೇ ದರ್ಜೆಯ ಈರುಳ್ಳಿ 70 ಕೆಜಿ ಚೀಲದ ಸಗಟು ದರ 250 ರಿಂದ 300 ರೂಪಾಯಿಗೆ ಮಾರಾಟವಾಗಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...