ಹಿಂಸಾತ್ಮಕ ಕ್ಯಾಪಿಟಲ್ ದಂಗೆ ಮತ್ತು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ಟ್ವಿಟರ್ ನಿಂದ ನಿಷ್ಕ್ರಿಯಗೊಳಿಸಿದ ನಂತರ ತನ್ನ ಅಂತರ್ಜಾಲದ ಪ್ರಾಬಲ್ಯವನ್ನು ಮರುಪಡೆಯಲು ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮದೇ ಸಾಮಾಜಿಕ ಜಾಲತಾಣವನ್ನು ಆರಂಭಿಸುವ ಯೋಜನೆಯನ್ನು ಘೋಷಿಸಿದ್ದಾರೆ.
“Truth social” ಮೀಡಿಯಾ ಮತ್ತು ಟೆಕ್ನಾಲಜಿ ಗ್ರೂಪ್ ಎಂಬ ಮಾಧ್ಯಮ ಸಂಸ್ಥೆ ಜೊತೆಗೆ “ಟ್ರುಥ್” (ಸತ್ಯ) ಎಂಬ ಆಪ್ ಆರಂಭಿಸುವುದಾಗಿ ತಿಳಿಸಿದ್ದಾರೆ. ಇದು ಈಗಾಗಲೇ ಆಪಲ್ ನ ಆಫ್ ಸ್ಟೋರ್ ನಲ್ಲಿ ಫ್ರೀ- ಆರ್ಡರ್ ಗೆ ಲಭ್ಯವಿದೆ ಎಂದು ಹೇಳಿದ್ದಾರೆ.
“ನಾವು ಟ್ವಿಟರ್ ನಲ್ಲಿ ತಾಲಿಬಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಸಮಾಜಘಾತುಕ ಶಕ್ತಿಗಳಿಗೆ ಅವಕಾಶ ಇರುವ ಟ್ವಿಟರ್ ನಲ್ಲಿ ಅಮೆರಿಕ ಜನರ ಆಗಿನ ಅಧ್ಯಕ್ಷರಾಗಿದ್ದವರಿಗೆ ಮಾತ್ರ ನಿರ್ಬಂಧ ಹೇರಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ” ಎಂದು ಟ್ರಂಪ್ ಕಿಡಿಕಾರಿದ್ದಾರೆ. ವಿಶ್ವದ ದಿಗ್ಗಜ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸಮವಾದ ಪೈಪೋಟಿಯನ್ನು ತಮ್ಮ ಹೊಸ ಆಪ್ ನೀಡುವುದರಲ್ಲಿ ಸಂದೇಹವಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆಕ್ವಿಸಿಷನ್ ಕಾರ್ಪೊರೇಷನ್ ಎಂಬ ಕಂಪನಿಯ ಜೊತೆಗೂಡಿ ಆಪ್ ಅಭಿವೃದ್ಧಿಗೊಳಿಸಲಾಗಿದ್ದು, ಇದು ಸುದ್ದಿ, ಆನ್ಲೈನ್ ಗೇಮ್ಸ್, ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಸಹ ಒದಗಿಸುತ್ತದೆ ಎಂದು ಹೇಳಿದ್ದಾರೆ.ತಾವು ಅಮೇರಿಕಾ ಅಧ್ಯಕ್ಷಗಾದಿಯನ್ನ ಏರುವಲ್ಲಿ ಸಾಮಾಜಿಕ ಜಾಲತಾಣಗಳು ಪ್ರಮುಖ ಪಾತ್ರ ವಹಿಸಿವೆ ಎಂಬುದನ್ನು ಸ್ಮರಿಸಿಕೊಂಡಿದ್ದಾರೆ.
ಈಗಾಗಲೇ ವರ್ಷಾರಂಭದಲ್ಲೇ “From the desk of Donald J Trump ” ಎಂಬ ಬ್ಲಾಗ್ ಬರವಣಿಗೆಯಲ್ಲಿ ಸಕ್ರಿಯರಾಗಿದ್ದಾರೆ.ಬಹಳ ಮಂದಿ ಸಧ್ಯದ ಬೃಹತ್ ಸಾಮಾಜಿಕ ಜಾಲತಾಣ ಸಂಘಟನೆಯ ( Big Tech) ವಿರುದ್ಧ ಸೆಟೆದು ನಿಲ್ಲುವ ಪ್ರಯತ್ನ ಯಾರಾದರೂ ಮಾಡಬಹುದಲ್ಲ ? ಎಂಬ ಪ್ರಶ್ನೆಗೆ ತಾವು ಸಧ್ಯದಲ್ಲೇ ಎದ್ದು ನಿಲ್ಲುವುದಾಗಿ ಹೇಳಿದ್ದಾರೆ.
ತಂತ್ರಜ್ಞಾನವು ಅತ್ಯಂತ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಇಂದಿನ ಜಗತ್ತಿನಲ್ಲಿ ಮಾಧ್ಯಮಗಳಲ್ಲಿ ಆಂತರಿಕ ಪೈಪೋಟಿ ಇದೆ. ಇಂತಹ ಸಂದರ್ಭದಲ್ಲಿ ವೈಜ್ಞಾನಿಕ ಪ್ರಗತಿಯ ಮುಂಚೂಣಿಯಲ್ಲಿರುವ ಅಮೆರಿಕಾದ ಮಾಜಿ ಅಧ್ಯಕ್ಷರೊಬ್ಬರು ಸಾಮಾಜಿಕ ಜಾಲತಾಣವನ್ನು ಆರಂಭ ಮಾಡಿರುವುದು ಎಲ್ಲರ ಗಮನ ಸೆಳೆಯುವಂತಿದೆ. ಪ್ರಸಕ್ತ ಅವರು ಆರಂಭಿಸಿರುವ “ಟ್ರುಥ್ ಸೋಶಿಯಲ್” ಜಾಲತಾಣ ಹೇಗೆ ಇಡೀ ಜಗತ್ತನ್ನು ವ್ಯಾಪಿಸುತ್ತದೆ ಎಂದು ಕಾದು ನೋಡಬೇಕಿದೆ.
ಟ್ರಂಪ್ ಈಗ “ಟ್ರುಥ್” ಒಡೆಯ
Date: