Thursday, December 18, 2025
Thursday, December 18, 2025

ಚೀನಾ ಬೋಯಿಂಗ್ ವಿಮಾನವನ್ನ ಉದ್ದೇಶಪೂರ್ವಕ ಪತನಗೊಳಿಸಲಾಗಿದೆ

Date:

ಮಾರ್ಚ್​ ತಿಂಗಳಿನಲ್ಲಿ ಚೀನಾದಲ್ಲಿ ದುರಂತಯೊಂದು ಸಂಭವಿಸಿತ್ತು. ಸಿಬ್ಬಂದಿ ಒಳಗೊಂಡಂತೆ 132 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ದಕ್ಷಿಣ ಚೀನಾದಲ್ಲಿ ಪತನಗೊಂಡು ಎಲ್ಲರು ಸಾವನ್ನಪ್ಪಿದ್ದರು.

ಆದರೆ, ಈಗ ಈ ಘಟನೆಯ ಬಗ್ಗೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅದೇನು ಅಂದರೆ, ಈ ಘಟನೆ ಉದ್ದೇಶಪೂರ್ವಕವಾಗಿಯೇ ನಡೆದ ದುಷ್ಕೃತ್ಯ ಎಂದು ತಿಳಿದುಬಂದಿದೆ.

ಪತನವಾದ ವಿಮಾನದಲ್ಲಿ ದೊರೆತ ಬ್ಲಾಕ್​ ಬಾಕ್ಸ್​ನಿಂದ ಸಂಗ್ರಹಿಸಲಾದ ಡೇಟಾ ಪ್ರಕಾರ, ಕಾಕ್​ಪಿಟ್​ನಲ್ಲಿ ಒಬ್ಬರು ಉದ್ದೇಶಪೂರ್ವಕವಾಗಿಯೇ ವಿಮಾನವನ್ನು ಪತನ ಮಾಡಿರುವುದು ಬೆಳಕಿಗೆ ಬಂದಿದೆ.

ಚೀನಾ ಈಸ್ಟರ್ನ್​ ಏರ್​ಲೈನ್ಸ್​ಗೆ ಸೇರಿದ ಬೋಯಿಂಗ್​ ಜೆಟ್​ 737-800 ವಿಮಾನವು ಗುವಾಂಗ್ಸಿ ಪ್ರದೇಶದಲ್ಲಿ ಮಾರ್ಚ್​ 21ರಂದು ಪತನವಾಗಿತ್ತು. ವಿಮಾನವು 132 ಪ್ಯಾಸೇಂಜರ್​ನ ಹೊತ್ತುಕೊಂಡು ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ತೆರಳುತ್ತಿತ್ತು. ಫ್ಲೈಟ್​ರಾಡರ್​ ಡೇಟಾ ಪ್ರಕಾರ ಪತನಗೊಂಡ ಸಮಯದಲ್ಲಿ ವಿಮಾನವು ಗಂಟೆಗೆ 700 ಕಿ.ಮೀ ವೇಗದಲ್ಲಿ 29 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು.

ಮಾರ್ಚ್​ 21ರಂದು ಮಧ್ಯಾಹ್ನ 1.11ಕ್ಕೆ ಟೇಕಾಫ್​ ಆಗಿರುವ ವಿಮಾನ ಮಧ್ಯಾಹ್ನ 3.05ರ ಸುಮಾರಿಗೆ ಮಾರ್ಗಮಧ್ಯೆ ಗುವಾಂಗ್ಸಿ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಕೆಳಮುಖವಾಗಿ ಕುಸಿದು ಪತನಗೊಂಡಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿತ್ತು.

ಈ ವಿಷಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದು 28 ವರ್ಷದಲ್ಲಿ ಚೀನಾದಲ್ಲಿ ನಡೆದ ಅತ್ಯಂತ ಅಪಾಯಕಾರಿ ವಿಮಾನ ಪತನ ಇದಾಗಿದೆ.

ಘಟನೆ ನಡೆದ 2 ತಿಂಗಳ ನಂತರ ವಿಮಾನದಲ್ಲಿ ದೊರೆತ ಬ್ಲಾಕ್​ಬಾಕ್ಸ್​ ಡೇಟಾವನ್ನು ಅಮೆರಿಕ ಅಧಿಕಾರಿಗಳು ವಿಶ್ಲೇಷಣೆ ಮಾಡಿದ್ದಾರೆ. ಕಾಕ್​ಪಿಟ್​ನಿಂದ ಉದ್ದೇಶಪೂರ್ವಕವಾಗಿಯೇ ವಿಮಾನವನ್ನು ಪತನ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

ವಿಮಾನ ದಿಢೀರನೇ ಕುಸಿಯುವ ಸಮಯದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರರ್​ಗಳು ಮತ್ತು ಹತ್ತಿರದ ವಿಮಾನಗಳಿಂದ ಪದೇ ಪದೇ ಕರೆ ಮಾಡಿದರೂ ಪೈಲಟ್‌ಗಳು ಸ್ಪಂದಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುಎಸ್​ನ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ಅಧ್ಯಕ್ಷೆ, ಜೆನ್ನಿಫರ್ ಹೋಮೆಂಡಿ ಮಾತನಾಡಿ, ನಮ್ಮ ಮಂಡಳಿಯ ತನಿಖಾಧಿಕಾರಿಗಳು ಮತ್ತು ಬೋಯಿಂಗ್ ಸಂಸ್ಥೆ, ಚೀನಾದ ವಿಮಾನ ತನಿಖೆಗೆ ಸಹಾಯ ಮಾಡಲು ಚೀನಾಕ್ಕೆ ಪ್ರಯಾಣಿಸಿದ್ದರು. ಈ ಸಂದರ್ಭದಲ್ಲಿ ಯಾವುದೇ ತುರ್ತು ಕ್ರಮದ ಅಗತ್ಯವಿರುವ ಯಾವುದೇ ಸಮಸ್ಯೆಗಳು ವಿಮಾನದಲ್ಲಿ ಇರಲಿಲ್ಲ ಎಂದು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಅಪಘಾತದ ತನಿಖೆಗೆ ತಾನು ಜವಾಬ್ದಾರನಲ್ಲ ಎಂದು ಚೀನಾದ ಈಸ್ಟರ್ನ್​ ಏರ್‌ಲೈನ್ ಈಗಾಗಲೇ ಹೇಳಿಕೊಂಡಿದೆ. ಹಾಗೂ ಏಪ್ರಿಲ್ 20ರಂದು ಬಿಡುಗಡೆಯಾದ ತನ್ನ ಪ್ರಾಥಮಿಕ ವರದಿಯಲ್ಲಿ ಚೀನಾ ಸರ್ಕಾರದ ಸಾರಾಂಶವನ್ನು ವರದಿಯಲ್ಲಿ ಉಲ್ಲೇಖಿಸಿದೆ.

ಹಾನಿಗೊಳಗಾದ ಬ್ಲಾಕ್​ಬಾಕ್ಸ್ ಡೇಟಾದ ಮರುಸ್ಥಾಪನೆ ಮತ್ತು ವಿಶ್ಲೇಷಣೆ ಇನ್ನೂ ಪ್ರಗತಿಯಲ್ಲಿದೆ ಎಂದು ವರದಿಯಲ್ಲಿ ತಿಳಿಸಿದೆ.

ಚೀನಾ ಈಸ್ಟರ್ನ್ ಪ್ರಕಾರ, ಪೈಲಟ್ ಮತ್ತು ಸಹ-ಪೈಲಟ್ ಇಬ್ಬರೂ ಉತ್ತಮ ಆರೋಗ್ಯ ಹೊಂದಿದ್ದರು. ಹಾಗೂ ಯಾವುದೇ ಹಣಕಾಸಿನ ಅಥವಾ ಕೌಟುಂಬಿಕ ಸಮಸ್ಯೆಗಳಿರಲಿಲ್ಲ. ವಿಮಾನದಿಂದ ಯಾವುದೇ ತುರ್ತು ಸಂಕೇತವನ್ನು ಕಳುಹಿಸಲಾಗಿಲ್ಲ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ, ಕಾಕ್‌ಪಿಟ್ ಭದ್ರತೆಯನ್ನು ಉಲ್ಲಂಘಿಸಿರುವ ಸಾಧ್ಯತೆಯಿಲ್ಲ ಎಂದು ಚೀನಾ ಈಸ್ಟರ್ನ್​ ಹೇಳಿದೆ. ಆದರೆ, ಇದೀಗ ಅಮೆರಿಕ ಬಿಡಗಡೆ ಮಾಡಿರುವ ವರದಿ ಇದಕ್ಕೆ ತದ್ವಿರುದ್ಧವಾಗಿದೆ. ಉದ್ದೇಶಪೂರ್ವಕವಾಗಿಯೇ ವಿಮಾನ ಪತನ ಮಾಡಲಾಗಿದೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...