ರಷ್ಯಾ ಹಾರಿಸಿದ ಹೈಪರ್ಸಾನಿಕ ಕ್ಷಿಪಣಿಯಿಂದ ಒಡೆಸಾದ ಬಂದರು ಧ್ವಂಸಗೊಂಡಿದೆ ಎಂದು ಉಕ್ರೇನ್ ಅಧಿಕಾರಿಗಳು ನಿನ್ನೆ ಮಂಗಳವಾರ ಮಾಹಿತಿ ತಿಳಿಸಿದ್ದಾರೆ.
ಸಾಮಗ್ರಿಗಳ ಸರಬರಾಜು ಮತ್ತು ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಅಸ್ತವ್ಯಸ್ತಗೊಳಿಸುವುದು. ಕಪ್ಪು ಸಮುದ್ರದಲ್ಲಿರುವ ಬಂದರು ನಾಶ ಮಾಡುವುದು ರಷ್ಯಾದ ಉದ್ದೇಶವಾಗಿದೆ.
ಇನ್ನೊಂದು ಕಡೆ, ರಷ್ಯಾ ಪಡೆಗಳಿಗೆ ಸಂಪೂರ್ಣ ನಿಯಂತ್ರಣ ಬಿಟ್ಟು ಕೊಡದಂತೆ ತೀವ್ರ ಪ್ರತಿರೋಧ ಒಡ್ಡಲಾಗುತ್ತಿರುವ ಮಹತ್ವದ ಮರಿಯುಪೋಲ್ ಬಂದರಿನಲ್ಲಿನ ಉಕ್ಕು ಸ್ಥಾವರದ ಮೇಲೂ ರಷ್ಯಾ ದಾಳಿ ಮಾಡಿದೆ. ಬಾಂಬ್ ದಾಳಿಗಳಿಂದ ತಪ್ಪಿಸಿಕೊಳ್ಳಲು ಇನ್ನೂ ಸುಮಾರು ನೂರು ಜನರು ಸುರಂಗ ಮಾರ್ಗಗಳಲ್ಲಿ ಅಡಗಿ ಕುಳಿತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರದೇಶದ ಇಝಿಯುಂ ಎಂಬಲ್ಲಿ ಮಾರ್ಚ್ನಲ್ಲಿ ರಷ್ಯಾ ನಾಶ ಮಾಡಿದ್ದ ಒಂದು ಕಟ್ಟಡದ ಅಡಿಯಲ್ಲಿ 44 ನಾಗರಿಕರ ದೇಹಗಳು ಪತ್ತೆಯಾಗಿವೆ ಎಂದು ಈ ಮಾಹಿತಿಯನ್ನು ಉಕ್ರೇನ್ ಅಧಿಕಾರಿಯೊಬ್ಬರು ನೀಡಿದ್ದಾರೆ.