Monday, December 8, 2025
Monday, December 8, 2025

ಯುದ್ಧವನ್ನ ಕೇವಲ ಡಾನ್ ಬಾಸ್ ಪ್ರದೇಶಕ್ಕೆ ಸೀಮಿತಮಾಡಿಲ್ಲ-ಹೇನ್ಸ್

Date:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಜತೆಗಿನ ಯುದ್ಧವನ್ನು ಕೇವಲ ಡಾನ್‍ ಬಸ್ ದಾಳಿಗೆ ಸೀಮಿತಗೊಳಿಸುವ ಸಾಧ್ಯತೆ ಇಲ್ಲ. ರಷ್ಯಾ ನಿಯಂತ್ರಿತ ಮೊಲ್ಡೋವಾ ಪ್ರದೇಶಕ್ಕೆ ಭೂ ಸೇತುವೆ ನಿರ್ಮಿಸಲು ರಷ್ಯಾ ಬದ್ಧವಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕ ಅವ್ರಿಲ್ ಹೇನ್ಸ್ ಹೇಳಿದ್ದಾರೆ.

ಅಧ್ಯಕ್ಷ ಪುಟಿನ್ ಅವರು ಉಕ್ರೇನ್ ಜತೆ ಸುಧೀರ್ಘ ಸಂಘರ್ಷಕ್ಕೆ ಸಜ್ಜಾಗಿದ್ದು, ಡಾನ್‍ಬಸ್‍ನ ಆಚೆಗೆ ತಮ್ಮ ಗುರಿಯನ್ನು ಸಾಧಿಸುವ ಉದ್ದೇಶ ಹೊಂದಿದ್ದಾರೆ” ಎಂದು ಹೇನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಪುಟಿನ್ ಅವರು ಮಾರ್ಷಿಯಲ್ ಕಾನೂನು ಆದೇಶ ಸೇರಿದಂತೆ ತಮ್ಮ ಸಂಪೂರ್ಣ ದೇಶವನ್ನು ಯುದ್ಧಕ್ಕಾಗಿ ಸಂಘಟಿಸುವ ಸಾಧ್ಯತೆ ಅಧಿಕವಾಗಿದೆ ಮತ್ತು ಉಕ್ರೇನ್‍ಗೆ ಪಾಶ್ಚಿಮಾತ್ಯ ದೇಶಗಳ ನೆರವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದ್ದಾರೆ ಎಂದು ಗುಪ್ತಚರ ವಿಭಾಗ ತಿಳಿಸಿದೆ.

ಉತ್ತರದಲ್ಲಿ ಕೀವ್ ನಗರವನ್ನು ವಶಪಡಿಸಿಕೊಳ್ಳಲು ವಿಫಲವಾದ ಬಳಿಕ ರಷ್ಯನ್ ಪಡೆಗಳನ್ನು ಪೂರ್ವ ಉಕ್ರೇನ್‍ನ ಡಾನ್‍ಬಸ್ ಪ್ರದೇಶದಲ್ಲಿ ಕೇಂದ್ರೀಕರಿಸುವ ಪುಟಿನ್ ನಿರ್ಧಾರ ಕೇವಲ ತಾತ್ಕಾಲಿಕ ಎನ್ನುವುದು ಅಮೆರಿಕ ಗುಪ್ತಚರ ವಿಭಾಗದ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

C.V. Rudra Radhya ಶಿವಮೊಗ್ಗದ ಯೋಗಗುರು ಸಿ.ವಿ.ರುದ್ರಾರಾಧ್ಯರಿಗೆಗೌರವ ಡಾಕ್ಟರೇಟ್ ಪ್ರದಾನ

C.V. Rudra Radhya ಡಾ. ಬಾಬು ರಾಜೇಂದ್ರ ಪ್ರಸಾದ್ ಇಂಟರ್ ನ್ಯಾಷನಲ್...

Shimoga Rural Police ಅಪರಿಚಿತ ಮಹಿಳೆಯ ಮೃತದೇಹ ಪತ್ತೆ.ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮಾಹಿತಿ.

Shimoga Rural Police ಅಮರಾವತಿ ಕ್ಯಾಂಪ್ ಮತ್ತು ನವಿಲೆ ಬಸಾಪುರದ ಮಧ್ಯದಲ್ಲಿನ...

Shimoga News ಹಿರೇಕೆರೂರು ತಾಲ್ಲೂಕಿನ ಇಂಗಳಗೋಡಿಯಿಂದವ್ಯಕ್ತಿ ನಾಪತ್ತೆ. ಪೊಲೀಸ್ ಪ್ರಕಟಣೆ

Shimoga News ಹಿರೇಕರೂರು ತಾಲೂಕು ಇಂಗಳಗೋಡಿ ಗ್ರಾಮ ವಾಸಿ ಸಿದ್ದಪ್ಪ ತಾರಗಿ...

B. Y. Raghavendra ಮಕ್ಕಳ ಸಾಂಸ್ಕೃತಿಕ ಪ್ರದರ್ಶನ ಮೆಚ್ಚಿದ ಸಂಸದ ರಾಘವೇಂದ್ರ

B. Y. Raghavendra ಭದ್ರಾವತಿಯ ನ್ಯೂ ಟೌನ್‌ನಲ್ಲಿರುವ ಶ್ರೀ ಸತ್ಯ ಸಾಯಿ...