Saturday, October 5, 2024
Saturday, October 5, 2024

ರಾಜ್ಯದಲ್ಲಿ ಕೋವಿಡ್ ಪೂರ್ಣ ಹೋಗಿಲ್ಲ ಎಚ್ಚರಿಕೆಯಿರಲಿ

Date:

ಜೂನ್​ನಲ್ಲಿ ಕೋವಿಡ್​ ನಾಲ್ಕನೇ ಅಲೆ ಬರುವ ಸಾಧ್ಯತೆ ಕುರಿತು ತಜ್ಞರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್​ ಸೋಂಕು ಪ್ರಕರಣಗಳು ಹೆಚ್ಚುತ್ತಿದೆ. ಮತ್ತೊಂದೆಡೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ (1,854ಕ್ಕೆ ಏರಿಕೆ) ಕರ್ನಾಟಕ ನಾಲ್ಕನೇ ಸ್ಥಾನಕ್ಕೇರಿರುವುದು ಆತಂಕಕ್ಕೆ ಕಾರಣವಾಗಿದೆ.

ದೆಹಲಿ ಕೋವಿಡ್​ ಸಕ್ರಿಯ ಪ್ರಕರಣಗಳಲ್ಲಿ (5,746 )ಮೊದಲ ಸ್ಥಾನದಲ್ಲಿದ್ದರೆ, ಕೇರಳ (2,888) 2 ಹಾಗೂ ಹರಿಯಾಣ (2,535) 3ನೇ ಸ್ಥಾನದಲ್ಲಿದೆ. ಕರ್ನಾಟಕದ ಬಳಿಕ ಉತ್ತರ ಪ್ರದೇಶ (1,742) 5ನೇ ಸ್ಥಾನ ಹಾಗೂ ಮಹಾರಾಷ್ಟ್ರ (1,109) 6ನೇ ಸ್ಥಾನದಲ್ಲಿದೆ. ಉಳಿದಂತೆ 18 ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 500ಕ್ಕಿಂತ ಕಡಿಮೆ ಇದೆ. 8 ರಾಜ್ಯಗಳಲ್ಲಿ ಒಂದಂಕಿ ಇದೆ.

ಕರ್ನಾಟಕದಲ್ಲಿ ಕಳೆದ ಎರಡು ತಿಂಗಳಲ್ಲಿ 6 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣ ವರದಿಯಾಗಿದ್ದು, 65 ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ನೆರೆಯ ಕೇರಳದಲ್ಲಿ ಸೋಂಕಿನ ಪ್ರಮಾಣದ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚಿದ್ದು, ಮೇ 3ರಂದು ಒಂದೇ ದಿನ 52 ಸಾವು ಹಾಗೂ ಮೇ 5ರಂದು 26 ಸಾವು ಸಂಭವಿಸಿದೆ.

ರಾಜ್ಯದಲ್ಲಿ ಕೋವಿಡ್​ ಸೋಂಕು ತಗ್ಗಿದೆಯಾದರೂ ಸಂಪೂರ್ಣ ಹೋಗಿಲ್ಲ. ಹಾಗಾಗಿ ಜನರು ರ್ನಿಲಕ್ಷ್ಯ ಮಾಡದೆ ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿ ಇನ್ನೂ ಕೆಲ ಕಾಲ ಕೋವಿಡ್​ ನಿಯಮ ಪಾಲಿಸುವ ಅಗತ್ಯವಿದೆ. ಜತೆಗೆ ಜನರೇ ಸ್ವಯಂ ಪ್ರೇರಿತರಾಗಿ ಮುನ್ನೆಚ್ಚರಿಕೆ ಡೋಸ್​ ಲಸಿಕೆ ಪಡೆಯುವುದು ಸೂಕ್ತ ಎಂದು ಕೋವಿಡ್​ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷಡಾ. ಎಂ.ಕೆ. ಸುದರ್ಶನ್​ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Chennabasappa ಬನ್ನಿ ಪೂಜೆಗೆ ಶಾಸಕ ಚೆನ್ನಿ ಅವರಿಂದ ಪೂರ್ವೋಚಿತ ಸಿದ್ಧತೆ

S.N.Chennabasappa ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ...

Shree Sigandur Chowdeshwari Temple ಸಿಗಂದೂರು ದೇವಿ ವೈಭವದ ನವರಾತ್ರಿ ಉತ್ಸವ

Shree Sigandur Chowdeshwari Temple ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ...

Madhu Bangarappa ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯ ಒದಗಿಸಿ- ಮಧು ಬಂಗಾರಪ್ಪ

Madhu Bangarappa ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು...

CM Siddharamaiah ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ- ಸಿದ್ಧರಾಮಯ್ಯ

CM Siddharamaiah ತಾಯಿ ಚಾಮುಂಡೇಶ್ವರಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ...