ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಗಡಿ ಹಾಳು ಮಾಡುವವರಿಗೆ ಅಮೆರಿಕ, ಇಸ್ರೇಲ್ʼನಂತೆ ಭಾರತವೂ ಸೆಡ್ಡು ಹೊಡೆಯಬಹುದು ಎಂದು ಹೇಳಿದರು.
ಈ ಹಿಂದೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ದಾಳಿ ನಡೆಸಿದಾಗ ಭಾರತ ಹೇಳಿಕೆ ನೀಡುತ್ತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವ್ರ ಸರ್ಕಾರ ರಚನೆಯಾದ ನಂತ್ರ ಪರಿಸ್ಥಿತಿ ಸುಧಾರಿಸಿದೆ ಎಂದು ಗೃಹ ಸಚಿವರು ಹೇಳಿದರು.
ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತ್ರ ನಡೆದ ಸರ್ಜಿಕಲ್ ಸ್ಟ್ರೈಕ್ʼನ್ನ ಶಾ ಉಲ್ಲೇಖಿಸಿದರು.
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 2016ರಲ್ಲಿ ಉರಿ ಹಾಗೂ 2019ರಲ್ಲಿ ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದಿದ್ದು, 10 ದಿನಗಳಲ್ಲಿ ಪಾಕಿಸ್ತಾನದೊಳಗೆ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿ ನಡೆಸಿದ್ದೇವೆ ಎಂದು ಶಾ ಹೇಳಿದರು.
ನೃಪತುಂಗ ವಿಶ್ವವಿದ್ಯಾನಿಲಯ, ಅದರ ಶೈಕ್ಷಣಿಕ ವಿಭಾಗ ಮತ್ತು ಇತರ ಹಲವಾರು ಯೋಜನೆಗಳನ್ನ ಉದ್ಘಾಟಿಸಿ ಮಾತನಾಡಿದ ಸಚಿವರು, ‘ಈ ಹಿಂದೆ ಕೇವಲ ಎರಡು ದೇಶಗಳು, ಯುಎಸ್ ಮತ್ತು ಇಸ್ರೇಲ್, ತಮ್ಮ ಗಡಿ ಮತ್ತು ಮಿಲಿಟರಿಯನ್ನ ಹಾಳು ಮಾಡಿದಾಗ ಪ್ರತೀಕಾರ ತೀರಿಸಿಕೊಳ್ಳುತ್ತಿದ್ವು. ಆದ್ರೆ, ಈಗ ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ನಮ್ಮ ಶ್ರೇಷ್ಠ ದೇಶ ಭಾರತವೂ ಈ ಗುಂಪಿಗೆ ಸೇರಿದೆ ಎಂದರು.