ಹಿಜಾಬ್, ಆಜಾನ್ ಮೈಕ್, ವ್ಯಾಪಾರಕ್ಕೆ ನಿರ್ಬಂಧ ಸೇರಿದಂತೆ ಅನೇಕ ವಿವಾದಗಳು ರಾಜ್ಯದಲ್ಲಿ ಹಿಂದೂ,ಮುಸ್ಲಿಂ ಕೋಮು ಸಾಮರಸ್ಯಕ್ಕೆ ಧಕ್ಕೆ ತಂದಿದ್ದವು. ಹುಬ್ಬಳ್ಳಿ ಗಲಭೆ ಬಳಿಕ ಮುಂದೆ ರಂಜಾನ್-ಬಸವ ಜಯಂತಿಗೆ ಹೇಗೆ ನಡೆಯುತ್ವೆ ಎನ್ನುವ ಅನುಮಾನ ಮೂಡುವಂತೆ ಮಾಡಿತ್ತು.
ಆದರೆ ವಿಜಯಪುರ ಜಿಲ್ಲೆಯಲ್ಲಿ ಒಟ್ಟೊಟ್ಟಿಗೆ ಬಂದ ಬಸವ ಜಯಂತಿ ಹಾಗೂ ರಂಜಾನ್ ಹಬ್ಬ ಭಾವೈಕ್ಯತೆಗೆ ಸಾಕ್ಷಿಯಾಗಿವೆ.
ವಿಜಯಪುರ ಜಿಲ್ಲೆಯ ಹಲವೆಡೆ ರಂಜಾನ್ ಹಬ್ಬ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಹಿಂದೂ-ಮುಸ್ಲಿಂರು ಸಾಮರಸ್ಯದಿಂದ ಬಸವ ಜಯಂತಿ ಹಾಗೂ ರಂಜಾನ್ ಹಬ್ಬವನ್ನ ಆಚರಿಸಿದ್ದಾರೆ. ವಿಜಯಪುರ ಜಿಲ್ಲೆಯ ತಾಲೂಕಾ ಕೇಂದ್ರಗಳಲ್ಲಿ ಮುಸ್ಲಿಂರು ನಮಾಜ್ ಬಳಿಕ ಬಸವ ಜಯಂತಿ ನಡೆದ ಸ್ಥಳಕ್ಕೆ ಬಂದು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರೆ. ಇನ್ನೊಂದೆಡೆ ರಂಜಾನ್ ನಮಾಜ್ ಮುಗಿಸಿಕೊಂಡು ಬಂದ ಮುಸ್ಲಿಂರಿಗೆ ಹಿಂದೂಗಳು ಉಪಹಾರ, ಮಜ್ಜಿಗೆ-ನೀರು ನೀಡುವ ಮೂಲಕ ಭಾವೈಕ್ಯತೆ ಸಾಕ್ಷಿಯಾಗಿದ್ದಾರೆ.