ವ್ಲಾಡಿಮಿರ್ ಪುಟಿನ್ ಅವರು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ.
ಆದ್ದರಿಂದ, ತಾತ್ಕಾಲಿಕವಾಗಿ ಅಧಿಕಾರವನ್ನು ದೇಶದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪಟ್ರುಶೇವ್ ಅವರಿಗೆ ಹಸ್ತಾಂತರಿಸಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಶಸ್ತ್ರಚಿಕಿತ್ಸೆಯ ಕಾರಣದಿಂದಾಗಿ ಪುಟಿನ್‌ಗೆ ಸ್ವಲ್ಪ ಸಮಯದ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿದೆ. ಕ್ಯಾನ್ಸರ್ ಮತ್ತು ಪಾರ್ಕಿನ್ಸನ್ ಸೇರಿದಂತೆ ಇತರ ಗಂಭೀರ ಕಾಯಿಲೆಗಳಿಂದ ಅವರು ಬಳಲುತ್ತಿರುವ ಬಗ್ಗೆ ವದಂತಿಗಳಿವೆ.
ಕೆಲವು ದಿನಗಳ ಹಿಂದೆ ಪುಟಿನ್ ಅವರು ನಿಕೊಲಾಯ್ ಪಟ್ರುಶೆವ್ ಅವರೊಂದಿಗೆ 2 ಗಂಟೆಗಳ ಕಾಲ ಸಂಭಾಷಣೆ ನಡೆಸಿದ್ದರು. ಪಟ್ರುಶೆವ್ ಅವರನ್ನು ಏಕೈಕ ವಿಶ್ವಾಸಾರ್ಹ ಮಿತ್ರ ಹಾಗೂ ಸರ್ಕಾರದಲ್ಲಿ ಸ್ನೇಹಿತ ಎಂದು ಪುಟಿನ್ ಪರಿಗಣಿಸುತ್ತಾರೆ. ಒಂದು ಸಂದರ್ಭದಲ್ಲಿ ಆರೋಗ್ಯ ತೀರಾ ಹದಗೆಟ್ಟರೆ, ತಾತ್ಕಾಲಿಕವಾಗಿ ಮತ್ತಷ್ಟು ದಿನಗಳ ಕಾಲ ದೇಶದ ಅಧಿಕಾರ ಪಟ್ರುಶೆವ್ ಅವರ ಬಳಿ ಮುಂದುವರೆಯುತ್ತದೆ ಎಂದು ವರದಿಯಿಂದ ತಿಳಿದುಬಂದಿದೆ.
ಆದರೆ, ಪುಟಿನ್ ದೀರ್ಘಕಾಲದವರೆಗೆ ಅಧಿಕಾರವನ್ನು ಹಸ್ತಾಂತರಿಸಲು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ. ದೇಶದ ನಿಯಂತ್ರಣವು ಹೆಚ್ಚೆಂದರೆ 2 ರಿಂದ 3 ದಿನಗಳ ಕಾಲ ಪಟ್ರುಶೇವ್ ಅವರ ಕೈಯಲ್ಲಿರಬಹುದಷ್ಟೇ ಎಂದು ಮಾಹಿತಿ ಇದೆ.