ಕೊರೊನಾ ಏರಿಳಿತ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಿನ್ನೆ ಸೋಮವಾರ ದೈನಂದಿನ ಸೋಂಕಿನಲ್ಲಿ 2,568 ಪ್ರಕರಣಗಳು ವರದಿಯಾಗಿದೆ. 20 ಸಾವುಗಳು ಸಂಭವಿಸಿವೆ. ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 4,30,84,913 ಕ್ಕೆ ತಲುಪಿದೆ.
ಸಕ್ರಿಯ ಪ್ರಕರಣಗಳು 19,137 ಕ್ಕೆ ಇಳಿದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
ಒಟ್ಟು ಸೋಂಕಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.0.04ರಷ್ಟಿದೆ. ಚೇತರಿಕೆ ದರ ಶೇ.98.74ರಷ್ಟು ದಾಖಲಾಗಿದೆ.
24 ಗಂಟೆಗಳ ಅವಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 363ಕ್ಕೆ ಇಳಿಕೆಯಾಗಿದೆ. ದಿನದ ಪಾಸಿಟಿವಿಟಿ ದರ ಶೇ. 0.61 ವಾರದ ಪಾಸಿಟಿವಿಟಿ ದರ ಶೇ.0.71 ಎಂದು ತಿಳಿಸಲಾಗಿದೆ.
ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,25,41,887 ಕ್ಕೆ ಏರಿದೆ, ಸಾವಿನ ಪ್ರಮಾಣ ಶೇ.1.22 ರಷ್ಟಿದೆ. 20 ಹೊಸ ಸಾವುಗಳಲ್ಲಿ ಕೇರಳದಿಂದ 15, ಪಂಜಾಬ್‍ನಿಂದ 3 ಮತ್ತು ಮಹಾರಾಷ್ಟ್ರ ಮತ್ತು ಮಿಜೋರಾಂನಿಂದ ತಲಾ ಒಂದು ಪ್ರಕರಣ ಸೇರಿದೆ. ಒಟ್ಟು ಸಾವಿನ ಸಂಖ್ಯೆ 5,23,889 ಕ್ಕೆ ಏರಿದೆ.