Wednesday, December 17, 2025
Wednesday, December 17, 2025

ಬೋರಿಸ್ ಜಾನ್ಸನ್ ಭಾರತಕ್ಕೆ ಭೇಟಿ ಮಹತ್ವದ ಮಾತುಕತೆ

Date:

ಇದೇ ಪ್ರಥಮ ಬಾರಿಗೆ ಬ್ರಿಟಿಷ್‌ ಪ್ರಧಾನಿ ಅವರು ಗುಜರಾತ್‌ಗೆ ಭೇಟಿ ನೀಡುತ್ತಿದ್ದಾರೆ. ಬೋರಿಸ್‌ ಜಾನ್ಸನ್‌ ಮುಂದಿನ ವಾರ ಎರಡು ದಿನಗಳ ಭಾರತ ಭೇಟಿಗೆ ಬರಲಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಲಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.

ಬೋರಿಸ್‌ ಅವರು ಪ್ರಧಾನಿಯಾದ ನಂತರ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಏಪ್ರಿಲ್‌ 21ರಂದು ಅವರ ಪ್ರಯಾಣ ಆರಂಭವಾಗಲಿದೆ. ಬ್ರಿಟನ್‌ ಮತ್ತು ಭಾರತದಲ್ಲಿನ ಪ್ರಮುಖ ವಲಯಗಳಲ್ಲಿನ ಹೂಡಿಕೆಗಳ ಕುರಿತು ಘೋಷಣೆಯಾಗಲಿವೆ ಎಂದು ಡೌನಿಂಗ್‌ ಸ್ಟ್ರೀಟ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಏಪ್ರಿಲ್‌ 22ರಂದು ನವದೆಹಲಿಯಲ್ಲಿ ಬೋರಿಸ್‌ ಜಾನ್ಸನ್‌ ಮತ್ತು ನರೇಂದ್ರ ಮೋದಿ ಭೇಟಿ ನಡೆಯಲಿದೆ. ಅಲ್ಲಿ ಭಾರತ ಮತ್ತು ಬ್ರಿಟನ್‌ ನಡುವಿನ ರಕ್ಷಣಾ ಕಾರ್ಯತಂತ್ರ, ರಾಜತಾಂತ್ರಿಕತೆ ಮತ್ತು ಆರ್ಥಿಕತೆಯ ಪಾಲುದಾರಿಕೆ, ಮುಕ್ತ ವ್ಯಾಪಾರ ಒಪ್ಪಂದ ಸಂಬಂಧಿಸಿದಂತೆ ಮಾತುಕತೆ ನಡೆಸಲಿದ್ದಾರೆ.

ನನ್ನ ಭಾರತದ ಭೇಟಿಯ ವೇಳೆ ಉಭಯ ರಾಷ್ಟ್ರಗಳಿಗೆ ಮುಖ್ಯವಾಗಿರುವ ವಿಚಾರಗಳನ್ನು ಪ್ರಸ್ತಾಪಿಸಲಿದ್ದೇನೆ. ಉದ್ಯೋಗ ಸೃಷ್ಟಿಯಿಂದ ಹಿಡಿದು, ಆರ್ಥಿಕತೆ ವೃದ್ಧಿ, ಇಂಧನ ಹಾಗೂ ರಕ್ಷಣಾ ಕ್ಷೇತ್ರದ ವಿಷಯಗಳನ್ನು ಒಳಗೊಂಡಿರಲಿವೆ ಎಂದು ಬೋರಿಸ್‌ ಅವರು ತಿಳಿಸಿದ್ದಾರೆ.

ಅಹಮದಾಬಾದ್‌ನಲ್ಲಿ ಅವರು ಪ್ರಮುಖ ಉದ್ದಿಮೆಗಳಿಗೆ ಭೇಟಿ ನೀಡಲಿದ್ದಾರೆ. ಎರಡೂ ರಾಷ್ಟ್ರಗಳ ನಡುವಿನ ವಾಣಿಜ್ಯ, ವ್ಯಾಪಾರ ಹಾಗೂ ಜನರ ಸಂಪರ್ಕಗಳ ಬಗ್ಗೆ ಚರ್ಚಿಸಲಿದ್ದಾರೆ. ಬ್ರಿಟನ್‌ನಲ್ಲಿರುವ ಬ್ರಿಟಿಷ್‌,ಭಾರತೀಯರಲ್ಲಿ ಅರ್ಧದಷ್ಟು ಜನರ ಮೂಲ ಗುಜರಾತ್‌ ಆಗಿದೆ.

ಕೈಗಾರಿಕೆಗಳಲ್ಲಿ ಹೂಡಿಕೆ, ಉದ್ಯೋಗ ಸೃಷ್ಟಿ, ಉಭಯ ರಾಷ್ಟ್ರಗಳ ನಡುವೆ ವಿಜ್ಞಾನ, ಆರೋಗ್ಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ಸಹಯೋಗ ಸೇರಿದಂತೆ ಪ್ರಮುಖ ಘೋಷಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.

ಬ್ರಿಟನ್‌ ಮತ್ತು ಭಾರತದ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯ ಭಾಗವಾಗಿ ಬ್ರಿಟನ್‌ನಲ್ಲಿ 530 ಮಿಲಿಯನ್‌ ಪೌಂಡ್‌ಗಳಷ್ಟು ಹೂಡಿಕೆ ಮಾಡಲು ಎರಡೂ ರಾಷ್ಟ್ರಗಳ ಪ್ರಧಾನಿಗಳು ಕಳೆದ ವರ್ಷ ಸಮ್ಮತಿಸಿದ್ದರು. ಭಾರತೀಯ ಕಂಪನಿಗಳ ಹೂಡಿಕೆಯಿಂದಾಗಿ ಬ್ರಿಟನ್‌ನಲ್ಲಿ 95,000 ಉದ್ಯೋಗಗಳು ಸೃಷ್ಟಿಯಾಗಿರುವುದಾಗಿ ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 18. ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ,...

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...