ಉಕ್ರೇನ್‌ನೊಂದಿಗೆ ತನ್ನ ಮಿಲಿಟರಿ ಆಕ್ರಮಣ ಮುಂದುವರೆಯುತ್ತಿದ್ದರೂ ಮಾಡಿಕೊಂಡಿರುವ ಒಪ್ಪಂದದಂತೆ ಭಾರತಕ್ಕೆ S-400ವಾಯು ರಕ್ಷಣಾ ವ್ಯವಸ್ಥೆಯ ಪರಿಕರಗಳನ್ನು ರಷ್ಯಾ ಪೂರೈಸಿದೆ ಎಂದು ತಿಳಿದುಬಂದಿದೆ.
ಒಪ್ಪಂದದ ಪ್ರಕಾರ ಮತ್ತಷ್ಟು ರಕ್ಷಣಾ ಪರಿಕರಗಳನ್ನು ಶೀಘ್ರದಲ್ಲೇ ಪೂರೈಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಕೊಟ್ಟಿರುವ ಮಾತಿನಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ ಹಾಗಾಗಿ ಒಪ್ಪಂದದಂತೆ ರಕ್ಷಣಾಯುಧಗಳನ್ನು ನೀಡಿರುವುದಾಗಿ ರಷ್ಯಾ ಹೇಳಿದೆ.
S-400 ನ ಮೊದಲ ಸ್ಕ್ವಾಡ್ರನ್ ಈಗಾಗಲೇ ವಾಯುಪಡೆಗೆ ಸೇರ್ಪಡೆಗೊಂಡಿವೆ. ಇನ್ನುಳಿದ ಐದು ರೆಜಿಮೆಂಟ್‌ಗಳು ಸೇರ್ಪಡೆ ಕ್ರಮದಲ್ಲಿವೆ ಎನ್ನಲಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸಿರುವ ತೀವ್ರ ಆರ್ಥಿಕ ನಿರ್ಬಂಧಗಳ ಹೊರತಾಗಿಯೂ, ರಷ್ಯಾ ಚಾಲ್ತಿಯಲ್ಲಿರುವ ಎಲ್ಲಾ ಒಪ್ಪಂದಗಳನ್ನು ಪೂರೈಸಲು ನಿರ್ಧರಿಸಿದೆ. ಈ ಸಂಬಂಧ ನಿಗದಿತ ಸಮಯದಲ್ಲಿ ಎಲ್ಲಾ ಪರಿಕರಗಳನ್ನು ವಿತರಣೆ ಮಾಡಲಾಗುವುದು ಎಂದು ರಷ್ಯಾ ಈ ಹಿಂದೆ ಹೇಳಿದಂತೆ, ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದೆ.