ಹಾರ್ದಿಕ ಅರ್ಧಶತಕ/ರಾಜಸ್ಥಾನ ವಿರುದ್ಧ ಗುಜರಾತ್ ಗೆ 37 ರನ್ ಜಯ
ನಾಯಕ ಹಾರ್ದಿಕ್ ಪಾಂಡ್ಯ (87) ಅವರ ಭರ್ಜರಿ ಅರ್ಧ ಶತಕ ಹಾಗೂ ಕೊನೆಯಲ್ಲಿ ದಯಾಳ್ (40ಕ್ಕೆ. 3) ಮತ್ತು ಲೂಕಿ ಫರ್ಗ್ಯುಸನ್ (32ಕ್ಕೆ 3) ಅವರು ಕರಾರುವಾಕ್ ದಾಳಿಯ ನೆರವಿನಿಂದ ಗುಜರಾತ್ ತಂಡ ಐಪಿಎಲ್ 15ನೇ ಆವೃತ್ತಿಯ 24ನೇ ಪಂದ್ಯದಲ್ಲಿ 32 ರನ್ ಗಳ ಅಂತರದಿಂದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೋಲುಣಿಸಿತು.
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸೋತು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಗುಜರಾತ್ ತಂಡ ನಿಗದಿತ 20 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ಬಾರಿಸಿತು.
ಇದಕ್ಕೆ ಪ್ರತ್ಯುತ್ತರವಾಗಿ ರಾಜಸ್ಥಾನ್ ರಾಯಲ್ಸ್ ತಂಡ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ (54 ರನ್,24 ಎಸೆತ) ಅವರ ಭರ್ಜರಿ ಅರ್ಧಶತಕ ದ ಹೊರತಾಗಿಯೂ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲಷ್ಟೇ ಶಕ್ತವಾಯಿತು.
ಸಂಜು ಸಮ್ಸನ್ ಪಡೆ ಎರಡನೇ ಸೋಲಿಗೆ ಗುರಿಯಾಯಿತು. ಯಶ್ ದಯಾಳ್ ಮತ್ತು ಲೂಕಿ ಫರ್ಗ್ಯೂಸನ್ ಟೈಟನ್ಸ್ ಪರ ನಿಖರ ಎಸೆತಗಳಿಂದ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್ಮನ್ ಗಳನ್ನು ಕಟ್ಟಿಹಾಕಿದರು.
ಇನ್ನಿಂಗ್ಸ್ ನ 18ನೇ ಓವರ್ ಎಸೆದ ಹಾರ್ದಿಕ್ ಪಾಂಡ್ಯ (ವೈಯಕ್ತಿಕ ಮೂರನೇ ಓವರ್) ಕಾರಣಾಂತರಗಳಿಂದ ಓವರ್ ಪೂರ್ಣಗೊಳಿಸಲಿಲ್ಲ.
ಆದ್ದರಿಂದ ವಿಜಯಶಂಕರ್ ಓವರ್ ನಲ್ಲಿ ಬಾಕಿ ಇದ್ದ ಮೂರು ಎಸೆತಗಳನ್ನು ಎಸೆದರು.
ಆಯ್ಕೆಮಾಡಿಕೊಂಡ ನಾಯಕ ಸಂಜು ಸ್ಯಾಮ್ಸನ್ ಅವರ ನಿಲುವನ್ನು ರಾಜಸ್ಥಾನ್ ರಾಯಲ್ಸ್ ಬೌಲರ್ ಗಳು ಆರಂಭದಲ್ಲೇನೊ ಸಮರ್ಥಿಸಿಕೊಂಡರು.
ಆದರೆ, ಆ ಬಳಿಕ ಎದುರಾಳಿ ಬ್ಯಾಟ್ಸ್ಮನ್ ಗಳಿಂದ ಚಚ್ಚಿಸಿಕೊಂಡರು. ಮ್ಯಾಥ್ಯೂ ವೇಡ್ (12) ಅವರನ್ನು ರನೌಟ್ ಮಾಡುವುದರ ಜೊತೆಗೆ ಗಿಲ್ (13) ಮತ್ತು ವಿಜಯಶಂಕರ್ (2) ವಿಕೆಟ್ ಕಬಳಿಸಿದ ಬೌಲರ್ ಗಳು ತಂಡಕ್ಕೆ ಆರಂಭಿಕ ಮೇಲುಗೈ ತಂದುಕೊಟ್ಟರು.
ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ವಿರುದ್ಧ ಸಿಡಿಲಬ್ಬರದ ಅರ್ಧ ಶತಕ ಸಿಡಿಸಿ ಉತ್ತಮ ಫಾರ್ಮ್ ನಲ್ಲಿದ್ದ ಗಿಲ್ ಅವರು ರಿಯಾನ್ ಪರಾಗ್ ಹೆಣೆದ ಬಲೆಗೆ ಬಿದ್ದರು.
53 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಗುಜರಾತ್ ಟೈಟನ್ಸ್ ಗೆ ನಾಯಕ ಹಾರ್ದಿಕ ಪಾಡ್ಯ ಮತ್ತು ಅಭಿನವ್ ಮನೋಹರ್ ಆಸರೆಯಾದರು.
ನಾಲ್ಕನೇ ವಿಕೆಟ್ ಗೆ ಜೊತೆಗೂಡಿದ ಈ ಜೋಡಿ ರಾಜಸ್ಥಾನ್ ರಾಯಲ್ಸ್ ಬೌಲರ್ ಗಳ ಮೈಚಳಿ ಬಿಡಿಸಿದರು ಕ್ರೀಡಾಂಗಣದ ಮೂಲೆ ಮೂಲೆಗೆ ಬೌಂಡರಿ, ಸಿಕ್ಸರ್ ಗಳ ಪ್ರದರ್ಶನ ಮಾಡಿದ ಹಾರ್ದಿಕ್ ಮತ್ತು ಮನೋಹರ್ ಜೋಡಿ ಅಭಿಮಾನಿಗಳಿಂದ ಹರ್ಷೋದ್ಗಾರ ಗಳಿಸಿತು.