ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಶೇಕಡ 15.3ರಷ್ಟು ಹೆಚ್ಚಳ ಆಗಿದೆ. ವ್ಯಾಪಾರ ವಹಿವಾಟು
₹ 2.36 ಲಕ್ಷ ಕೋಟಿಗೆ ತಲುಪಿದೆ ಎಂದು ಚೀನಾ ಸರ್ಕಾರ ಮಾಹಿತಿ ನೀಡಿದೆ.
ಈ ಅವಧಿಯಲ್ಲಿ ಚೀನಾದಿಂದ ಭಾರತಕ್ಕೆ ಆಮದು ಆಗುವ ಉತ್ಪನ್ನಗಳ ಮೌಲ್ಯವು ₹ 2.06 ಲಕ್ಷ ಕೋಟಿಗೆ ತಲುಪಿದೆ ಎನ್ನಲಾಗಿದೆ.
ವಹಿವಾಟು ಏರಿಕೆಯ ಪ್ರವೃತ್ತಿಯು ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೂಡ ಮುಂದುವರಿದಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 15.3ರಷ್ಟು ಜಾಸ್ತಿ ಆಗಿದೆ ಎಂದು ಸರ್ಕಾರಿ ಸ್ವಾಮ್ಯದ ಪತ್ರಿಕೆಯೊಂದು ವರದಿ ಮಾಡಿದೆ ಎಂದು ತಿಳಿದುಬಂದಿದೆ.
ಹಿಂದಿನ ವರ್ಷದಲ್ಲಿ ಭಾರತ-ಚೀನಾ ದ್ವಿಪಕ್ಷೀಯ ವ್ಯಾಪಾರ ವಹಿವಾಟು ದಾಖಲೆಯ ₹ 9.53 ಲಕ್ಷ ಕೋಟಿಗೆ ತಲುಪಿತ್ತು.