ಮಾನ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರು ಇಂದು ವರ್ಚುವಲ್ ಮಾದರಿಯಲ್ಲಿ ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ರಷ್ಯಾದಿಂದ ಕಚ್ಚಾ ತೈಲವನ್ನು ಕೊಂಡುಕೊಳ್ಳಲು ಮುಂದಾಗಿರುವ ಭಾರತದ ಮೇಲೆ ತೈಲವನ್ನು ಕೊಂಡು ಕೊಳ್ಳಬಾರದು ಎಂದು ಅಮೆರಿಕ, ಪಾಶ್ಚಾತ್ಯ ರಾಷ್ಟ್ರಗಳು ಒತ್ತಡ ಹೇರುತ್ತಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರ ದ ನಾಯಕರ ಮಾತುಕತೆ ಅವಶ್ಯಕತೆ ಇದೆ.
ಈ ಭೇಟಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ, ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧಗಳು, ವ್ಯಾಪಾರ- ವಹಿವಾಟಿನಲ್ಲಿ ಉಭಯ ದೇಶಗಳು ನೀಡುತ್ತಿರುವ ಪರಸ್ಪರ ಸಹಾಯ, ಇಂಡೋ,ಪೆಸಿಫಿಕ್ ಪ್ರಾಂತ್ಯದಲ್ಲಿನ ದೇಶಗಳ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ಈ ವಿಷಯಗಳನ್ನು ಚರ್ಚಿಸುವ ಸಾಧ್ಯತೆಗಳಿವೆ.
ಇದರ ಜೊತೆಗೆ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಇತ್ತೀಚೆಗೆ ಉಂಟಾಗಿರುವ ವಿದ್ಯಮಾನಗಳೂ ಉಭಯ ನಾಯಕರ ನಡುವೆ ಚರ್ಚೆ ಗೊಳಪಡಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.